Greatest Catch: ಮೈದಾನ ದಾಟಿದ ಸಿಕ್ಸರ್; ಒಂದೇ ಕೈನಲ್ಲಿ ಕ್ಯಾಚ್ ಹಿಡಿದ ಬೈಕ್‌ನಲ್ಲಿ ಚಲಿಸುತ್ತಿದ್ದ ವ್ಯಕ್ತಿ! Video
ಕ್ರೀಡಾಂಗಣದ ಹೊರಗೆ ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಒಂದೇ ಕೈಯಿಂದ ಸಿಕ್ಸ್-ಬೌಂಡ್ ಚೆಂಡನ್ನು ಹಿಡಿದಿದ್ದು, ಈ ಅದ್ಭುತ ಕ್ಯಾಚ್‌ನ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ.
ಸಾಮಾನ್ಯವಾಗಿ ಬ್ಯಾಟರ್‌ಗಳು ಸಿಕ್ಸರ್ ಬಾರಿಸಿದಾಗ ಚೆಂಡು ಪ್ರೇಕ್ಷಕರ ಗ್ಯಾಲರಿಗೆ ಅಥವಾ ಮೈದಾನದ ಹೊರಗೆ ಬೀಳುವುದು ಸಹಜ. ಆದರೆ ಪಾಕಿಸ್ತಾನದಲ್ಲಿ ಮೈದಾನದಲ್ಲಿ ಸಿಕ್ಸರ್ ಬಾರಿಸಿದ ಚೆಂಡನ್ನು ಹೊರಗೆ ಚಲಿಸುತ್ತಿರುವ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಕ್ಯಾಚ್ ಹಿಡಿದಿದ್ದಾರೆ.
ಪಾಕಿಸ್ತಾನದ ಸ್ವಾತ್ ಪ್ರೀಮಿಯರ್ ಲೀಗ್ ಪಂದ್ಯ ಒಂದು ವಿಚಿತ್ರ ಮತ್ತು ಆಲ್ ಟೈಮ್ ಗ್ರೇಟ್ ಕ್ಯಾಚ್ ಗೆ ಸಾಕ್ಷಿಯಾಗಿದೆ. ಕ್ಷಣದಲ್ಲಿ, ಕ್ರೀಡಾಂಗಣದ ಹೊರಗೆ ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಒಂದೇ ಕೈಯಿಂದ ಸಿಕ್ಸ್-ಬೌಂಡ್ ಚೆಂಡನ್ನು ಹಿಡಿದಿದ್ದು, ಈ ಅದ್ಭುತ ಕ್ಯಾಚ್‌ನ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ.
ಸ್ವಾತ್ ಪ್ರೀಮಿಯರ್ ಲೀಗ್‌ನ ಎಂಟನೇ ಆವೃತ್ತಿಯಲ್ಲಿ, ಸ್ವಾತ್ ಸ್ಟ್ರೈಕರ್ಸ್ ಮತ್ತು ಜಿಕೆಆರ್ ಡಿರ್ ನಡುವಿನ ಟಿ20 ಪಂದ್ಯದಲ್ಲಿ ಈ ಘಟನೆ ನಡೆದಿದೆ. ಬ್ಯಾಟರ್ ಒಬ್ಬರು ಬಾರಿಸಿದ ಬೃಹತ್ ಸಿಕ್ಸರ್ ಚೆಂಡು ಕ್ರೀಡಾಂಗಣದ ಗೋಡೆಯನ್ನು ದಾಟಿ ಪಕ್ಕದ ರಸ್ತೆಯತ್ತ ಚಿಮ್ಮಿತು. ಅದೇ ಸಮಯಕ್ಕೆ ಸರಿಯಾಗಿ ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ, ಗಾಳಿಯಲ್ಲಿ ತೇಲಿ ಬರುತ್ತಿದ್ದ ಚೆಂಡನ್ನು ಅತ್ಯಂತ ಸಲೀಸಾಗಿ ಒಂದೇ ಕೈಯಲ್ಲಿ ಹಿಡಿದಿದ್ದಾನೆ.
ಈ ವಿಡಿಯೋವನ್ನು ಫಾಕ್ಸ್ ಕ್ರಿಕೆಟ್ ಮತ್ತು 7ನ್ಯೂಸ್ ಆಸ್ಟ್ರೇಲಿಯಾ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಕ್ರೀಡಾ ವಾಹಿನಿಗಳು ಹಂಚಿಕೊಂಡಿದ್ದು, ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದೆ.