ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

2ನೇ ಟೆಸ್ಟ್, 2ನೇ ದಿನದಾಟ ಅಂತ್ಯ: ಟೀಂ ಇಂಡಿಯಾ ಬ್ಯಾಟರ್ ಗಳ ವೈಫಲ್ಯ, ಭಾರತ 116/6

ಭಾರತ ತಂಡದ ಅಗ್ರ ಕ್ರಮಾಂಕದ ಬ್ಯಾಟರ್ ಗಳು ಸಂಪೂರ್ಣ ವಿಫಲವಾಗಿದ್ದು, ಭಾರತ ಮರ್ಮಾಘಾತ ಎದುರಿಸಿತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಡಕೌಟ್ ಆದರೆ, ಕೆಎಲ್ ರಾಹುಲ್ 25 ರನ್ ಗಳಿಸಿ ಜೇಕಬ್ ಡಫಿಗೆ..

ಟೀಂ ಇಂಡಿಯಾ ಬ್ಯಾಟರ್ ಗಳ ವೈಫಲ್ಯ
Srinivasa Murthy VN
Updated On : 28 Nov 2026, 12:04 pm

ಕ್ರೈಸ್ಟ್ ಚರ್ಚ್: ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟ ಅಂತ್ಯವಾಗಿದ್ದು, ಭಾರತ ಕೇವಲ 116 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.

ಕ್ರೈಸ್ಟ್ ಚರ್ಚ್ ನ ಹ್ಯಾಗ್ಲೆ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ 356 ರನ್ ಗಳಿಗೆ ಉತ್ತರವಾಗಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತ ತಂಡ ಕಿವೀಸ್ ವೇಗಿಗಳ ಪ್ರಾಬಲ್ಯದ ಎದುರು ಮಂಕಾಯಿತು.

ಭಾರತ ತಂಡದ ಅಗ್ರ ಕ್ರಮಾಂಕದ ಬ್ಯಾಟರ್ ಗಳು ಸಂಪೂರ್ಣ ವಿಫಲವಾಗಿದ್ದು, ಭಾರತ ಮರ್ಮಾಘಾತ ಎದುರಿಸಿತು.

Advertisement

Advertisement

ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಡಕೌಟ್ ಆದರೆ, ಕೆಎಲ್ ರಾಹುಲ್ 25 ರನ್ ಗಳಿಸಿ ಜೇಕಬ್ ಡಫಿಗೆ ವಿಕೆಟ್ ಒಪ್ಪಿಸಿದರು.

Also Read

2ನೇ ಟೆಸ್ಟ್‌ನಿಂದಲೂ ಸಿರಾಜ್‌ಗೆ ಕೊಕ್; 'ಇದು ಒಳ್ಳೆಯ ರೀತಿ ಅಂತ್ಯವಾಗಲ್ಲ' ಎಂದು ಎಚ್ಚರಿಸಿದ ಆರ್. ಅಶ್ವಿನ್!

ದೇವದತ್ ಪಡಿಕ್ಕಲ್ ಕೂಡ 21 ರನ್ ಗಳಿಸಿ ನಿರ್ಗಮಿಸಿದರೆ, ಶುಭ್ ಮನ್ ಗಿಲ್ 17, ರಿಷಬ್ ಪಂತ್ 23 ಮತ್ತು ವಾಷಿಂಗ್ಟನ್ ಸುಂದರ್ 10 ರನ್ ಗಳಿಸಿ ಔಟಾದರು.

ಆ ಮೂಲಕ ಭಾರತ 2ನೇ ದಿನದಾಟದ ಅಂತ್ಯಕ್ಕೆ ಭಾರತ ಕೇವಲ 116 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇದೀಗ ಭಾರತ ಮಾನ ಬಾಲಂಗೋಚಿ ಆಟಗಾರರ ಮೇಲಿದ್ದು, ಉಳಿದ ನಾಲ್ತು ವಿಕೆಟ್ ನಲ್ಲಿ ಭಾರತ 200ಕ್ಕೂ ಅಧಿಕ ರನ್ ಗಳಿಸಬೇಕಿದೆ.

ಕಿವೀಸ್ ಪರ ಡಫಿ ಮತ್ತು ಕೈಲ್ ಜೇಮಿಸನ್ ತಲಾ 2 ವಿಕೆಟ್ ಪಡೆದರೆ, ಮ್ಯಾಟ್ ಹೆನ್ರಿ ಮತ್ತು ಸ್ಮಿತ್ ತಲಾ 1 ವಿಕೆಟ್ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement