ಕೃನಾಲ್ ಪಾಂಡ್ಯ 
ಕ್ರಿಕೆಟ್

ಭಾರತ-ಪಾಕ್ ಪಂದ್ಯಕ್ಕೂ ಮುನ್ನವೇ ಕಿರಿಕ್; ಅಬ್ಬಾಸ್ ಅಫ್ರಿದಿಗೆ ಕೈಕುಲುಕದ ಕೃನಾಲ್ ಪಾಂಡ್ಯ, ಆಗಿದ್ದೇನು?

ಹಾಂಗ್‌ಕಾಂಗ್ ಸಿಕ್ಸಸ್ 2026 ಟೂರ್ನಿಯ ಭಾರತ-ಪಾಕಿಸ್ತಾನ ಪಂದ್ಯದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಟಾಸ್ ವೇಳೆ ಪಾಕಿಸ್ತಾನದ ನಾಯಕ ಅಬ್ಬಾಸ್ ಅಫ್ರಿದಿ ಅವರಿಗೆ ಕೃನಾಲ್ ಪಾಂಡ್ಯ ಪಾಂಡ್ಯ ಹಸ್ತಲಾಘವ ಮಾಡದೆ ಹೋಗಿರುವ..

ಹಾಂಗ್‌ಕಾಂಗ್: ಜಾಗತಿಕ ಕ್ರಿಕೆಟ್ ವೇದಿಕೆಯಲ್ಲಿ ಮತ್ತೆ ಭಾರತ-ಪಾಕಿಸ್ತಾನ ತಿಕ್ಕಾಟ ಮುಂದುವರೆದಿದ್ದು, ಉಭಯ ತಂಡದ ನಾಯಕರು ಮತ್ತೆ ಹಸ್ತ ಲಾಘವ ಮಾಡದೇ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾರೆ.

ಹಾಂಗ್‌ಕಾಂಗ್ ಸಿಕ್ಸಸ್ 2026 ಟೂರ್ನಿಯ ಭಾರತ-ಪಾಕಿಸ್ತಾನ ಪಂದ್ಯದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಟಾಸ್ ವೇಳೆ ಪಾಕಿಸ್ತಾನದ ನಾಯಕ ಅಬ್ಬಾಸ್ ಅಫ್ರಿದಿ ಅವರಿಗೆ ಕೃನಾಲ್ ಪಾಂಡ್ಯ ಹಸ್ತಲಾಘವ ಮಾಡದೆ ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಅಕ್ಟೋಬರ್ 30ರ ಶುಕ್ರವಾರ ಅಂದರೆ ಇಂದು ಹಾಂಗ್‌ಕಾಂಗ್‌ನ ಮೊಂಗ್‌ಕಾಕ್‌ನ ಮಿಷನ್ ರೋಡ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಗ್ರೂಪ್ ಸಿ ಪಂದ್ಯದಲ್ಲಿ ಮುಖಾಮುಖಿಯಾಗಿವೆ.

ಪಂದ್ಯಕ್ಕೂ ಮುನ್ನ ನಡೆದ ಟಾಸ್ ಪ್ರಕ್ರಿಯೆಯಲ್ಲಿ ಉಭಯ ತಂಡಗಳ ನಾಯಕರಾದ ಕೃನಾಲ್ ಪಾಂಡ್ಯ ಪಾಂಡ್ಯ ಮತ್ತು ಅಬ್ಬಾಸ್ ಅಫ್ರಿದಿ ಪರಸ್ಪರ ಹಸ್ತಲಾಘವ ಮಾಡಲಿಲ್ಲ. ಸಾಮಾನ್ಯವಾಗಿ ಟಾಸ್ ವೇಳೆ ಉಭಯ ತಂಡಗಳ ನಾಯಕರು ಕೈಕುಲುಕುವುದು ಕ್ರಿಕೆಟ್ ಸಂಪ್ರದಾಯ. ಆದರೆ ಈ ಬಾರಿ ಅದು ನಡೆಯದಿರುವುದು ಚರ್ಚೆಗೆ ಕಾರಣವಾಗಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಕ್ರಿಕೆಟ್ ಪಂದ್ಯಗಳಲ್ಲೂ ಹಸ್ತಲಾಘವ ಮಾಡದ ಸಂಪ್ರದಾಯ ಮುಂದುವರಿದಿದೆ. ವಿಶೇಷವಾಗಿ 2025ರ ಏಷ್ಯಾಕಪ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡ ಪಾಕಿಸ್ತಾನ ಆಟಗಾರರೊಂದಿಗೆ ಪಂದ್ಯಕ್ಕೂ ಮುನ್ನ ಹಾಗೂ ಪಂದ್ಯದ ಬಳಿಕ ಹಸ್ತಲಾಘವ ಮಾಡುವುದನ್ನು ತಪ್ಪಿಸಿತ್ತು.

ಬಳಿಕ ನಡೆದ ಎಲ್ಲ ಭಾರತ-ಪಾಕಿಸ್ತಾನ ಪಂದ್ಯಗಳಲ್ಲಿ ಇದು ಮುಂದುವರೆದಿತ್ತು. ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರೂ ಕೂಡ ಇದನ್ನು ಮುಂದುವರೆಸಿಕೊಂಡು ಹೋಗಿದ್ದಾರೆ.

ಇದೀಗ ಕೃನಾಲ್ ಪಾಂಡ್ಯ ಅವರ ನಡೆ ಕೂಡ ಇದೇ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.

ಹಾಂಗ್‌ಕಾಂಗ್ ಸಿಕ್ಸಸ್‌ನಲ್ಲಿ ಕ್ರುನಾಲ್ ನಾಯಕತ್ವ ಏಕೆ?

ಹಾಂಗ್‌ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಭಾರತ ತಂಡವನ್ನು ಕೃನಾಲ್ ಪಾಂಡ್ಯ ಮುನ್ನಡೆಸುತ್ತಿದ್ದಾರೆ. ಭಾರತದ ನ್ಯೂಜಿಲೆಂಡ್ ಪ್ರವಾಸಕ್ಕೆ ಭುವನೇಶ್ವರ್ ಕುಮಾರ್ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಕೃನಾಲ್ ಪಾಂಡ್ಯ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ.

ಭಾರತ ತಂಡದಲ್ಲಿ ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ಶಶಾಂಕ್ ಸಿಂಗ್, ರಾಹುಲ್ ತೆವಾಟಿಯಾ, ಟಿ. ನಟರಾಜನ್ ಹಾಗೂ ಕುಲ್ವಂತ್ ಖೇಜ್ರೋಲಿಯಾ ಕೂಡ ಸ್ಥಾನ ಪಡೆದಿದ್ದಾರೆ. ಇತ್ತ ಹಾಲಿ ಚಾಂಪಿಯನ್ ಪಾಕಿಸ್ತಾನ ತಂಡವನ್ನು ಅಬ್ಬಾಸ್ ಅಫ್ರಿದಿ ಮುನ್ನಡೆಸುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಜೊತೆಗೆ ಗ್ರೂಪ್ ಸಿ ಯಲ್ಲಿ ಸ್ಥಾನ ಪಡೆದಿವೆ.

ಆರು ಓವರ್‌ಗಳ ರೋಚಕ ಕ್ರಿಕೆಟ್ ಕದನ

ಹಾಂಗ್‌ಕಾಂಗ್ ಸಿಕ್ಸಸ್ ಟೂರ್ನಿ ಸಾಮಾನ್ಯ ಕ್ರಿಕೆಟ್ ಪಂದ್ಯಗಳಿಗಿಂತ ಭಿನ್ನವಾಗಿದೆ. ಈ ಮಾದರಿಯಲ್ಲಿ ಪ್ರತಿ ತಂಡಕ್ಕೆ ಸಾಮಾನ್ಯವಾಗಿ ಆರು ಓವರ್‌ಗಳ ಬ್ಯಾಟಿಂಗ್ ಅವಕಾಶವಿರುತ್ತದೆ. ಮೂರು ದಿನಗಳ ಕಾಲ ನಡೆಯುವ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸುತ್ತಿವೆ.

ಅತ್ಯಂತ ವೇಗದ ಆಟಕ್ಕೆ ಹೆಸರಾದ ಈ ಟೂರ್ನಿಯಲ್ಲಿ ಪ್ರತಿ ಓವರ್ ಕೂಡ ಮಹತ್ವದ್ದಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಆರಂಭಕ್ಕೂ ಮುನ್ನವೇ ನಾಯಕರ ಹಸ್ತಲಾಘವದ ವಿಚಾರ ಸುದ್ದಿಯಾಗಿದ್ದು, ಪಂದ್ಯದ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Uttarakhand helicopter crash: ಛಿದ್ರ ಛಿದ್ರವಾಗಿ ಬಿದ್ದ ಹೆಲಿಕಾಪ್ಟರ್, ಸುಟ್ಟುಕರಕಲಾದ ಸ್ಥಿತಿಯಲ್ಲಿ ಐವರು ಕನ್ನಡಿಗರು ಸೇರಿದಂತೆ ಆರು ಮೃತದೇಹಗಳು ಪತ್ತೆ!

ನ.19ಕ್ಕೆ ನಟ ವಿಷ್ಣುವರ್ಧನ್, ನಟಿ ಬಿ.ಸರೋಜಾದೇವಿಗೆ ಮರಣೋತ್ತರವಾಗಿ 'ಕರ್ನಾಟಕ ರತ್ನ ಪ್ರಶಸ್ತಿ' ಪ್ರದಾನ; ನಟ ರಜನಿಕಾಂತ್ ಕರೆಸಲು ಚಿಂತನೆ!

ಗೌರಿ ಲಂಕೇಶ್ ಹತ್ಯೆಯಿಂದ ಘಾಸಿಗೊಂಡ ಪ್ರಕಾಶ್ ರಾಜ್; ನಾನು ದೇವರನ್ನು ನಂಬುತ್ತೇನೆ, ಅವರು ನಂಬಲ್ಲ: ಪತ್ನಿ ಪೋನಿ ವರ್ಮಾ ಸಂವಾದ!

Nora Fatehi ಗೆ ಮತ್ತೆ ಸಂಕಷ್ಟ: ಸುಕೇಶ್ ಚಂದ್ರಶೇಖರ್ ಸುಲಿಗೆ ಪ್ರಕರಣದಲ್ಲಿ ಪೊಲೀಸ್ ಸಮನ್ಸ್!

ಭಾನುವಾರ ಬೆಂಗಳೂರು - ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಚಾಲನೆ; ಇಲ್ಲಿದೆ ವೇಳಾಪಟ್ಟಿ