ವಾಸಿಂ ಅಕ್ರಂ ಮತ್ತು ಇರ್ಫಾನ್ ಪಠಾಣ್ 
ಕ್ರಿಕೆಟ್

'ಸೇಡಿನ ಮನೋಭಾವ ಸರಿಯಲ್ಲ'.. 'ನಮ್ಮ ವಿರುದ್ಧ ಏನಾದರೊಂದು ಟ್ವೀಟ್ ಮಾಡ್ತಾನೇ ಇರ್ತಾನೆ': ಇರ್ಫಾನ್ ಪಠಾಣ್ ಬಗ್ಗೆ ಪಾಕಿಸ್ತಾನ ಮಾಜಿ ವೇಗಿ Wasim Akram ಅಚ್ಚರಿ ಹೇಳಿಕೆ

ಪಾಕಿಸ್ತಾನ ಕ್ರಿಕೆಟ್ ಕುರಿತು ಸಾಕಷ್ಟು ಟೀಕೆಗಳನ್ನು ಮಾಡಿ ಸುದ್ದಿಗೆ ಗ್ರಾಸವಾಗಿದ್ದರು. ಇದೇ ವಿಚಾರ ಇದೀಗ ಪಾಕಿಸ್ತಾನ ಮಾಜಿ ವೇಗಿ ವಾಸೀಂ ಅಕ್ರಮ್ ಮಾತನಾಡಿದ್ದು, 'ನಮ್ಮ ವಿರುದ್ಧ ಏನಾದರೊಂದು ಟ್ವೀಟ್ ಮಾಡ್ತಾನೇ ಇರ್ತಾನೆ' ಎಂದು..

ಇಸ್ಲಾಮಾಬಾದ್: ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಪಾಕಿಸ್ತಾನದ ವಿರುದ್ದ ಏನಾದರೊಂದು ಟ್ವೀಟ್ ಮಾಡ್ತಾನೆ ಇರ್ತಾನೆ ಎಂದು ಪಾಕಿಸ್ತಾನದ ಮಾಜಿ ಲೆಜೆಂಡ್ ವೇಗಿ ವಾಸಿಂ ಅಕ್ರಮ್ ಹೇಳಿದ್ದಾರೆ.

ಹೌದು.. ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಬಳಿಕ ಕಮೆಂಟರಿಯಲ್ಲಿ ತೊಡಗಿಸಿಕೊಂಡಿರುವ ಭಾರತದ ಮಾಜಿ ವೇಗಿ ಇರ್ಫಾನ್ ಪಠಾಣ್ ತಮ್ಮ ಮೊನಚಾದ ಹೇಳಿಕೆಗಳ ಮೂಲಕವೇ ಸುದ್ದಿಗೆ ಗ್ರಾಸವಾಗುತ್ತಿದ್ದಾರೆ.

ಈ ಹಿಂದೆ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಆಫ್ಘಾನಿಸ್ತಾನ ಗೆದ್ದಾಗ ಮೈದಾನದಲ್ಲೇ ಇರ್ಫಾನ್ ಪಠಾಣ್ ಆಫ್ಘನ್ ಆಟಗಾರರ ಬೆಂಬಲಿಸಿ ಕುಣಿದು ಕುಪ್ಪಳಿಸಿದ್ದರು.

ಆ ಬಳಿಕವೂ ಪಾಕಿಸ್ತಾನ ಕ್ರಿಕೆಟ್ ಕುರಿತು ಸಾಕಷ್ಟು ಟೀಕೆಗಳನ್ನು ಮಾಡಿ ಸುದ್ದಿಗೆ ಗ್ರಾಸವಾಗಿದ್ದರು. ಇದೇ ವಿಚಾರ ಇದೀಗ ಪಾಕಿಸ್ತಾನ ಮಾಜಿ ವೇಗಿ ವಾಸೀಂ ಅಕ್ರಮ್ ಮಾತನಾಡಿದ್ದು, 'ನಮ್ಮ ವಿರುದ್ಧ ಏನಾದರೊಂದು ಟ್ವೀಟ್ ಮಾಡ್ತಾನೇ ಇರ್ತಾನೆ' ಎಂದು ಪರೋಕ್ಷ ಬೇಸರ ವ್ಯಕ್ತಪಡಿಸಿದ್ದಾರೆ.

2004ರಲ್ಲಿ ಮೊದಲ ಭೇಟಿ

ಇತ್ತೀಚೆಗೆ ವಾಸಿಂ ಅಕ್ರಮ್ ಅವರು ಇರ್ಫಾನ್ ಪಠಾಣ್ ಜತೆಗಿನ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. 2004ರಲ್ಲಿ ಮೊದಲ ಬಾರಿಗೆ ಪಠಾಣ್ ಅವರನ್ನು ಭೇಟಿಯಾಗಿದ್ದಾಗಿ ಅಕ್ರಮ್ ಹೇಳಿದ್ದಾರೆ. ಆ ಸಮಯದಲ್ಲಿ ಪಠಾಣ್ ಅವರ ಕ್ರಿಕೆಟ್ ಮೇಲಿನ ಉತ್ಸಾಹ ಹಾಗೂ ವರ್ತನೆ ತಮ್ಮನ್ನು ಮೆಚ್ಚಿಸಿತ್ತು ಎಂದು ಅಕ್ರಮ್ ನೆನಪಿಸಿಕೊಂಡಿದ್ದಾರೆ.

“2004ರಲ್ಲಿ ಇರ್ಫಾನ್ ಆಸ್ಟ್ರೇಲಿಯಾ ಪ್ರವಾಸಕ್ಕೆ ಬಂದಾಗ ನನ್ನನ್ನು ಭೇಟಿಯಾಗಿದ್ದರು. ನಾನು ಆಗ ESPNStarಗಾಗಿ ಕಾಮೆಂಟರಿ ಮಾಡುತ್ತಿದ್ದೆ. ಅವರು ನನ್ನ ದೊಡ್ಡ ಅಭಿಮಾನಿಯಾಗಿದ್ದರು. ನಮ್ಮನ್ನು ನೋಡುತ್ತಲೇ ಬೆಳೆದಿದ್ದರು. ನಾನು ಅವರಿಗೆ ಅಲ್ಲಲ್ಲಿ ಕೆಲವು ಸಲಹೆಗಳನ್ನು ನೀಡಿದ್ದೆ. ಆದರೆ ಅವರ ವೃತ್ತಿಜೀವನದ ಆರಂಭದಲ್ಲೇ ಅವರು ಉತ್ತಮ ಪ್ರದರ್ಶನ ನೀಡಿದರು” ಎಂದು ಅಕ್ರಮ್ 1 Mint ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ.

“ಆರಂಭದಿಂದಲೇ ಅವರ ಬೌಲಿಂಗ್ ಆ್ಯಕ್ಷನ್ ನನ್ನದಕ್ಕೆ ಹೋಲುತ್ತಿತ್ತು. ಆದರೆ ಆಟಗಾರರು ನಿಮ್ಮ ಬಳಿ ಸಲಹೆ ಕೇಳಿದಾಗ, ನೀವು ಹೆಚ್ಚಾಗಿ ಅವರ ಮನಸ್ಥಿತಿಯ ಬಗ್ಗೆ ಮಾತನಾಡುತ್ತೀರಿ. ಆ ಹಂತಕ್ಕೆ ಅವರು ದೇಶವನ್ನು ಪ್ರತಿನಿಧಿಸುವ ಮಟ್ಟ ತಲುಪಿರುತ್ತಾರೆ. ಮಣಿಕಟ್ಟಿನ ಸ್ಥಾನ, ಬ್ಯಾಟರ್‌ನನ್ನು ಹೇಗೆ ಓದಬೇಕು, ಯಾವಾಗ ಬೌಲಿಂಗ್‌ನಲ್ಲಿ ವೈವಿಧ್ಯ ಬಳಸಬೇಕು, ಯಾವಾಗ ಬಳಸಬಾರದು ಎಂಬುದರ ಬಗ್ಗೆ ಸಲಹೆ ನೀಡಬಹುದು” ಎಂದು ಅಕ್ರಮ್ ಹೇಳಿದ್ದಾರೆ.

“ಇರ್ಫಾನ್ ಒಳ್ಳೆಯ ಹುಡುಗ, ಆದರೆ ಪಾಕ್ ವಿರುದ್ಧ ಟ್ವೀಟ್ ಮಾಡ್ತಾನೆ!”

ಇರ್ಫಾನ್ ಪಠಾಣ್ ಜತೆಗಿನ ತಮ್ಮ ಉತ್ತಮ ಬಾಂಧವ್ಯದ ಬಗ್ಗೆಯೂ ಮಾತನಾಡಿದ ಅಕ್ರಮ್, ಪಠಾಣ್ ಆಗಾಗ ತಮ್ಮನ್ನು ಭೇಟಿಯಾಗುತ್ತಾರೆ ಎಂದು ಹೇಳಿದ್ದಾರೆ. ಆದರೆ ಇದೇ ವೇಳೆ ಪಠಾಣ್ ಅವರ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳ ಬಗ್ಗೆ ಅಕ್ರಮ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಇರ್ಫಾನ್ ಒಳ್ಳೆಯ ಹುಡುಗ. ಅವರು ಈಗಲೂ ನನ್ನನ್ನು ಭೇಟಿಯಾಗುತ್ತಿರುತ್ತಾರೆ. ಆದರೆ ಪಾಕಿಸ್ತಾನದ ವಿರುದ್ಧ ಏನಾದರೊಂದು ಟ್ವೀಟ್ ಮಾಡುತ್ತಲೇ ಇರುತ್ತಾರೆ. ನಮ್ಮ ಅಭಿಮಾನಿಗಳೂ ಸಿದ್ಧರಾಗಿರುತ್ತಾರೆ. ಅವರಿಗೂ ಯಾವುದನ್ನೂ ಸುಮ್ಮನೆ ಬಿಟ್ಟುಬಿಡುವ ಅಭ್ಯಾಸವಿಲ್ಲ. ಅವರು ಅದಕ್ಕೆ ಪ್ರತಿಕ್ರಿಯಿಸಲೇಬೇಕು” ಎಂದು ಅಕ್ರಮ್ ಹೇಳಿದ್ದಾರೆ.

ಭಾರತ-ಪಾಕ್ ಪಂದ್ಯಗಳ ಬಗ್ಗೆ ಅಕ್ರಮ್ ಖಡಕ್ ಮಾತು

ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಗಳಿಗೆ ಸಿಗುವ ಅತಿಯಾದ ಪ್ರಚಾರದ ಬಗ್ಗೆಯೂ ವಾಸಿಂ ಅಕ್ರಮ್ ಮಾತನಾಡಿದ್ದಾರೆ. ಅಭಿಮಾನಿಗಳು ಭಾರತ-ಪಾಕಿಸ್ತಾನ ಪಂದ್ಯವನ್ನು ಕೇವಲ ಒಂದು ಕ್ರಿಕೆಟ್ ಪಂದ್ಯವೆಂದು ಪರಿಗಣಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಸೇಡಿನ ಮನೋಭಾವ ಸರಿಯಲ್ಲ

“ಜನರಿಗೆ ತುಂಬಾ ಸಮಯವಿದೆ. ಇದು ಕೇವಲ ಒಂದು ಆಟ ಎಂಬುದನ್ನು ಅವರು ಏಕೆ ಅರ್ಥಮಾಡಿಕೊಳ್ಳುವುದಿಲ್ಲ? ಅಂತಿಮವಾಗಿ ಇದು ಒಂದು ಪಂದ್ಯ ಮಾತ್ರ. ಯಾರಾದರೂ ಗೆಲ್ಲಬೇಕು, ಯಾರಾದರೂ ಸೋಲಬೇಕು. ನಂತರ ಮುಂದಿನ ಪಂದ್ಯಕ್ಕೆ ಸಾಗಬೇಕು. ಆದರೆ ಬಹಳ ವರ್ಷಗಳ ಹಿಂದೆ ನಡೆದ ಘಟನೆಗಳನ್ನೂ ಇನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ. ಸೇಡು ತೀರಿಸಿಕೊಳ್ಳಬೇಕು ಎಂಬ ಮನೋಭಾವ ಇಂದಿನ ಕಾಲಕ್ಕೆ ಸರಿಹೊಂದುವುದಿಲ್ಲ. ಖಾಲಿ ಮನಸ್ಸು ದೆವ್ವದ ಕಾರ್ಯಾಗಾರ ಎಂಬ ಮಾತಿನಂತೆಯೇ ಇದು” ಎಂದು ವಾಸಿಂ ಅಕ್ರಮ್ ಹೇಳಿದ್ದಾರೆ.

ವಾಸೀಂ ಅಕ್ರಂ ಹಿನ್ನಲೆ

ಪಾಕಿಸ್ತಾನದ ದಿಗ್ಗಜ ವೇಗದ ಬೌಲರ್ ವಾಸಿಂ ಅಕ್ರಮ್ ಅವರನ್ನು ವಿಶ್ವ ಕಂಡ ಅತ್ಯುತ್ತಮ ಎಡಗೈ ವೇಗದ ಬೌಲರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. 460 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಾಕಿಸ್ತಾನ ಪರ ಆಡಿರುವ ಅಕ್ರಮ್, ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಒಟ್ಟು 916 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರ ಅದ್ಭುತ ಪ್ರದರ್ಶನ ಪಾಕಿಸ್ತಾನ ಕ್ರಿಕೆಟ್ ತಂಡ ಹೊಸ ಎತ್ತರಕ್ಕೇರಲು ಪ್ರಮುಖ ಕಾರಣವಾಗಿತ್ತು.

ವೇಗ, ಸ್ವಿಂಗ್ ಹಾಗೂ ವಿಭಿನ್ನ ಬೌಲಿಂಗ್ ತಂತ್ರಗಳಿಂದ ವಿಶ್ವದ ಬ್ಯಾಟರ್‌ಗಳನ್ನು ಕಾಡುತ್ತಿದ್ದ ಅಕ್ರಮ್, 2003ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕವೂ ತಮ್ಮದೇ ಛಾಪು ಉಳಿಸಿಕೊಂಡಿದ್ದಾರೆ. ಆದರೆ ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಅವರ ಬೌಲಿಂಗ್ ಶೈಲಿಯಲ್ಲಿ ಅಕ್ರಮ್ ಅವರ ಛಾಯೆಯನ್ನು ಹಲವರು ಕಂಡಿದ್ದರು.

2003ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಇರ್ಫಾನ್ ಪಠಾಣ್ ತಮ್ಮ ವೇಗದ ಬೌಲಿಂಗ್‌ನಿಂದ ಗಮನ ಸೆಳೆದಿದ್ದರು. ಅದಕ್ಕಿಂತ ಹೆಚ್ಚಾಗಿ, ಅವರ ಬೌಲಿಂಗ್ ಆ್ಯಕ್ಷನ್ ವಾಸಿಂ ಅಕ್ರಮ್ ಅವರ ಶೈಲಿಯನ್ನು ಹೋಲುತ್ತಿದ್ದುದು ವಿಶೇಷ ಗಮನ ಸೆಳೆದಿತ್ತು.

ತಮ್ಮ ವೃತ್ತಿಜೀವನದಲ್ಲಿ ಪಠಾಣ್ ಮೂರು ಮಾದರಿಯ ಕ್ರಿಕೆಟ್‌ಗಳಲ್ಲಿ ಒಟ್ಟು 301 ವಿಕೆಟ್‌ಗಳನ್ನು ಪಡೆದಿದ್ದು, ಭಾರತದ ಪ್ರಮುಖ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಅಕ್ರಮ್ ಅವರಂತೆಯೇ ಇರ್ಫಾನ್ ಪಠಾಣ್ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಕಾಮೆಂಟ್ರಿ ಕ್ಷೇತ್ರಕ್ಕೆ ಕಾಲಿಟ್ಟರು. ಇದೀಗ ಅವರು ಕ್ರಿಕೆಟ್ ವಿಶ್ಲೇಷಕರಾಗಿಯೂ ಗುರುತಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಾಕ್‌ನ F-16 ವಿಮಾನ ಹೊಡೆದುರುಳಿಸಿದ್ದ ಅಭಿನಂದನ್ ಅವಧಿಗೂ ಮುನ್ನವೇ ನಿವೃತ್ತಿ; ಈಗ ಗೋವಾ ಏರ್ಲೈನ್ಸ್ ಪೈಲಟ್!

ದ್ವಿಚಕ್ರ ವಾಹನ ಮಾಲೀಕರಿಗೆ ಬೈಕ್ ಟ್ಯಾಕ್ಸಿ ಓಡಿಸಲು ಅನುಮತಿ ಕೊಡಿ, ಇದರಿಂದ 8 ಕೋಟಿ ಉದ್ಯೋಗ ಸೃಷ್ಟಿ: ರಾಜ್ಯಗಳಿಗೆ ನಿತಿನ್ ಗಡ್ಕರಿ ಮನವಿ

ಜನಾರ್ದನ ರೆಡ್ಡಿ ಅಂತಾರಾಷ್ಟ್ರೀಯ ಕಳ್ಳರ ಸಂಘದ ಅಧ್ಯಕ್ಷ, ಶ್ರೀರಾಮುಲು ಉಪಾಧ್ಯಕ್ಷ, ಲೂಟಿಕೋರರಿಂದ ಪಾಠ ಕಲಿಯಬೇಕಿಲ್ಲ: ಪ್ರದೀಪ್ ಈಶ್ವರ್

ಸಿಎಂಗೆ ಕಟ್ಟಿದ ಚಿನ್ನದ ರಾಖಿ ಕೂಡ ರಕ್ಷಿಸಲಿಲ್ಲ; Konda Surekhaಗೆ ಶಾಕ್ ಕೊಟ್ಟ ರೇವಂತ್ ರೆಡ್ಡಿ, ಸಂಪುಟದಿಂದ ಗೇಟ್‌ಪಾಸ್

KPSC ಹಗರಣ: ಕುಮಾರಸ್ವಾಮಿ ವಿರುದ್ದವೇ ಪ್ರಾಸಿಕ್ಯೂಷನ್ ಅಸ್ತ್ರ? ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಸಾಧ್ಯತೆ