ಕಾಡಿಗೆ ಎಳೆದೊಯ್ದು ಅಪ್ರಾಪ್ತೆ ಮೇಲೆ ಅತ್ಯಾಚಾರ
ಪ್ರೀತಿಸುವಂತೆ ಒತ್ತಾಯಿಸಿ ಅಪ್ರಾಪ್ತ ಬಾಲಕಿ..
ಮುಂಡಗೋಡು: ಪ್ರೀತಿಸುವಂತೆ ಒತ್ತಾಯಿಸಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ಮೂವರು ದೃಷ್ಕರ್ಮಿಗಳು ಅತ್ಯಾಚಾರವೆಸಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನಲ್ಲಿ ನಡೆದಿದೆ.
ಮಜ್ಜಿಗೇರಿಯಲ್ಲಿ ನಾಗರಾಜ್ ಬೋವಿ(21) ಎಂಬ ದುಷ್ಕರ್ಮಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿಕೊಂಡು ಬಾಲಕಿಯನ್ನು ಅಪಹರಿಸಿ ಕಾಡಿನೊಳಗೆ ಕರೆದೊಯ್ದು, ಮರಕ್ಕೆ ಕಟ್ಟಿಹಾಕಿದ್ದಾರೆ. 15 ವರ್ಷದ ಬಾಲಕಿಯನ್ನು ಪ್ರೀತಿಸುವಂತೆ ನಾಗರಾಜ್ ಒತ್ತಾಯಿಸಿದ್ದು, ಆಕೆಯನ್ನು ಅತ್ಯಾಚಾರ ಮಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಮೂವರು ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಬಂದ ಬಾಲಕಿ ಪೋಷಕರೊಂದಿಗೆ ತೆರಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಕಾಡಿನೊಳಗೆ ನನ್ನನ್ನು ಕರೆದುಕೊಂಡು ಹೋಗಿ, ಮರಕ್ಕೆ ಕಟ್ಟಿ ಹಾಕಿ ಅತ್ಯಾಚಾರ ಮಾಡಿದ್ದಾರೆ ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.
ಪ್ರಕರಣ ದಾಖಲಿಸಿಕೊಂಡ ಮುಂಡಗೋಡು ಪೊಲೀಸರು, ನಾಗರಾಜ್ ಮತ್ತು ಆತನ ಸ್ನೇಹಿತರಾದ ಮಂಜುನಾಥ್ ಹಾವೇರಿ, ರಮೇಶ್‌ನನ್ನು ಬಂಧಿಸಿದ್ದಾರೆ.