ರೌಡಿ ಪ್ರವೀಣ್ ಮೇಲೆ ಗುಂಡಿನ ದಾಳಿ
ಕುಖ್ಯಾತ ರೌಡಿ ಪ್ರವೀಣ್ ಮೇಲೆ ಪೊಲೀಸರು ಶುಕ್ರವಾರ ಗುಂಡಿನ ದಾಳಿ ನಡೆಸಿದ್ದಾರೆ...
ಬೆಂಗಳೂರು: ಕುಖ್ಯಾತ ರೌಡಿ ಪ್ರವೀಣ್ ಮೇಲೆ ಪೊಲೀಸರು ಶುಕ್ರವಾರ ಗುಂಡಿನ ದಾಳಿ ನಡೆಸಿದ್ದಾರೆ.
ಅಲಸೂರಿನ ಕಲ್ಲಹಳ್ಳಿಯ ಸ್ಮಶಾನದ ಸಮೀಪ ಗುಂಡಿನ ದಾಳಿ ನಡೆದಿದೆ. ಪ್ರವೀಣ್ ಬರುತ್ತಿದ್ದ ಎಂಬ ಮಾಹಿತಿ ತಿಳಿದ ಪೊಲೀಸರು ಆತನನ್ನು ಬಂಧಿಸಿಲು ತೆರಳಿದ್ದಾರೆ.
10ಕ್ಕೂ ಹೆಚ್ಚು ಪ್ರಕರಣದ ಆರೋಪಿ ರೌಡಿ ಪ್ರವೀಣನನ್ನು ಪೊಲೀಸರು ಬಂಧಿಸಲು ಮುಂದಾದಾಗ, ಇನ್ಸ್‌ಪೆಕ್ಟರ್ ಮೇಲೆ ಪ್ರವೀಣ್ ಹಲ್ಲೆ ಮಾಡಿದ್ದಾನೆ.
ಈ ಹಿನ್ನಲೆಯಲ್ಲಿ ಭಾರತೀನಗರ ಇನ್ಸ್‌ಪೆಕ್ಟರ್ ನಾಗರಾಜ್ ಗುಂಡಿನ ದಾಳಿ ನಡೆಸಿದ್ದಾರೆ. ಪ್ರವೀಣ್‌ಗೆ ಗುಂಡು ತಗುಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಇನ್ಸ್‌ಪೆಕ್ಟರ್
ಇನ್ಸ್‌ಪೆಕ್ಟರ್ ನಾಗರಾಜ್ ಅವರಿಗೂ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.