ಎಕ್ಸ್ಪ್ರೆಸ್ ರೈಲಿನ ಬೋಗಿಗಳ ನಡುವಿನ ಸಂಪರ್ಕ ಕಡಿತ
ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಮೈಸೂರು-ದರ್ಬಾಂಗ್ ಎಕ್ಸ್ಪ್ರೆಸ್ ರೈಲಿನ...
ಮಂಡ್ಯ: ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಮೈಸೂರು-ದರ್ಬಾಂಗ್ ಎಕ್ಸ್ಪ್ರೆಸ್ ರೈಲಿನ ಬೋಗಿಗಳ ನಡುವಿನ ಸಂಪರ್ಕ ಕಡಿತವಾಗಿರುವ ಘಟನೆ ಶನಿವಾರ ನಡೆದಿದೆ.
ಮೈಸೂರು-ದರ್ಬಾಂಗ್ ಎಕ್ಸ್ಪ್ರೆಸ್ ರೈಲಿನ ಬೋಗಿಗಳ ನಡುವಿನ ಲಿಂಕ್ ತುಂಡಾಗಿ, 9 ಬೋಗಿಗಳನ್ನು ಬಿಟ್ಟು ರೈಲಿನ ಎಂಜಿನ್ 1 ಕಿ.ಮೀ ಮುಂದೆ ಸಾಗಿ ನಿಂತಿದೆ. ಲಿಂಕ್ ತುಂಡಾದ 9 ಬೋಗಿಗಳು ಮಂಡ್ಯ ರೇಲ್ವೆ ನಿಲ್ದಾಣದಲ್ಲಿ ನಿಂತುಕೊಂಡಿದೆ.
ರೈಲಿನ ಎಂಜಿನ್ ಜೊತೆ 13 ಬೋಗಿಗಳು ಸಾಗಿದ್ದು, ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.