ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಹೊಳೆ ಲಿಂಗೇಶ್ವರ!

ಸೊರ ಬಂಕಸಾಣದ ಹೊಳೇಲಿಶ್ವೇರ ದೇಗುಲಕ್ಕೆ ವರದಾ ನದಿ ನೀರು ನುಗ್ಗಿದೆ.
Lingaraj Badiger
Updated On : 9 Aug 2014, 12:23 pm

ಸೊರಬ: ಕಳೆದ ಎರಡು ವಾರದಿಂದ ಬಿಡದೆ ಸುರಿಯುತ್ತಿದ್ದ ಮಳೆ ಶುಕ್ರವಾರ ತುಸು ಹಿಂದೆ ಸರಿದು ಕೃಷಿ ಚಟುವಟಿಕೆಯತ್ತ ರೈತರು ಮರಳಲು ಅವಕಾಶ ನೀಡಿದೆ.

ಸತತ ಮಳೆಯಿಂದಾಗಿ ತಾಲೂಕಿನ ವರದಾ, ದಂಡಾವತಿ ನದಿ ತೀರ ಪ್ರದೇಶದ ಸಾವಿರಾರು ಹೆಕ್ಟೇರು ಜಮೀನಿನಲ್ಲಿ ಸುಮಾರು 40 ದಿನಗಳಿಂದ ನೀರು ನಿಂತಿದ್ದು, ಬೆಳೆ ಸಂಪೂರ್ಣ ಹಾನಿಗೊಳಗಾಗಿದೆ. ಹಲವೆಡೆ ನೀರು ರಸ್ತೆಗೆ ನುಗ್ಗಿ ಸಂಚಾರಕ್ಕೆ ಅಡಚಣೆಯೊಡ್ಡಿದೆ. ಆ ಮೂಲಕ ಕಳಪೆ ಕಾಮಗಾರಿಗಳನ್ನು ಬೆಳಕಿಗೆ ತಂದಿದೆ.

ಹೋದ ವರ್ಷವಷ್ಟೆ ನಿರ್ಮಿಸಿದ್ದ ತಾಲೂಕಿನ ಕಟ್ಟಿನಕೆರೆ ಕಿರು ಸೇತುವೆಯ ಒಂದು ಪಾರ್ಶ್ವ ಕುಸಿದಿದ್ದು, ಕೋಳಿಸಾಲು, ಪುರ ಸಂಪರ್ಕ ಕಡಿದು ಹೋಗಿದೆ. ಈ ಸೇತುವೆಯ ತಳಪಾಯ ಕುಸಿಯಲು ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎಂದು ಗುತ್ತಿಗೆದಾರ, ಅಭಿಯಂತರರ ವಿರುದ್ಧ ಗ್ರಾಮಸ್ಥರು ಹರಿಹಾಯ್ದಿದ್ದಾರೆ.

ಹೆಸರಿ ಗ್ರಾಮದ ಕೆರೆ ತುಂಬಿ ಗ್ರಾಮದ ದೇವಸ್ಥಾನ, ಶಾಲಾ ಆವರಣದೊಳಕ್ಕೆ ನೀರು ನುಗ್ಗಿದೆ. ಇಂಡಿಹಳ್ಳಿ ಕೆರೆ ತುಂಬಿ ರಸ್ತೆಗೆ ನೀರು ನುಗ್ಗಿದೆ. ತಾಲೂಕಿನ ಬಂಕಸಾಣ, ಕಚವಿ ರಸ್ತೆಗೆ ನೀರು ನುಗ್ಗಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ.

ಶಿಡ್ಡಿಹಳ್ಳಿ ಗ್ರಾಮ ಸಂಪರ್ಕ ಕಡಿದಿದ್ದು, ಇನ್ನೂ ತೆರವಾಗಿಲ್ಲ. ಕುಪ್ಪಗಡ್ಡೆ ಮಡ್ಡಿಕುಮ್ರಿ ಗ್ರಾಮ ದ್ವೀಪದಂತಾಗಿದೆ. ಕಟ್ಟಿನಕೆರೆ ಬಳಿ ಒಂದು ಎಮ್ಮೆ, ಹೊಳೆಕೊಪ್ಪ, ಮಾಗಡಿಯಲ್ಲಿ ಎತ್ತುಗಳು ನೀರಲ್ಲಿ ಕೊಚ್ಚಿ ಹೋಗಿವೆ. ಜಡೆ ಕೋಡಿಕೊಪ್ಪದಲ್ಲಿ ಕೊಟ್ಟಿಗೆ ಕುಸಿದ ಪರಿಣಾಮ ಒಂದು ಕುರಿ ಸಾವನ್ನಪ್ಪಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement