ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ವೈದ್ಯರಿಂದ ಗ್ರಾಮೀಣ ಪ್ರದೇಶಗಳ ಕಡೆಗಣನೆ-ಸಿದ್ದರಾಮಯ್ಯ ವಿಷಾದ

ವೈದ್ಯರು ಗ್ರಾಮೀಣ ಪ್ರದೇಶಗಳನ್ನು ಕಡೆಗಣಿಸಿದ್ದಾರೆ ಎಂದು...

Mainashree
Updated On : 10 Aug 2014, 11:03 am

ಬೆಂಗಳೂರು: ವೈದ್ಯರು ಗ್ರಾಮೀಣ ಪ್ರದೇಶಗಳನ್ನು ಕಡೆಗಣಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದರು.

ಸೇಂಟ್ ಜಾನ್ ವೈದ್ಯ ಕಾಲೇಜು ಶನಿವಾರ ಆಯೋಜಿಸಿದ್ದ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಿಗೆ ಆರೋಗ್ಯ ಸವಲತ್ತುಗಳು ಲಭ್ಯವಾಗುತ್ತಿಲ್ಲ. ವೈದ್ಯರು ಕೂಡಾ ಹಳ್ಳಿಗಳಲ್ಲಿ ಕೆಲಸ ಮಾಡಲು ಹಿಂಜಿರಿಯುತ್ತಾರೆ. ಹಳ್ಳಿಗಳಿಗೆ ಹೆಚ್ಚಿನ ಸೌಲಭ್ಯ ನೀಡಲು ಸರ್ಕಾರದ ಬಳಿಯೂ ಅನುದಾನವಿಲ್ಲ. ಹೀಗಾಗಿ ಗುಣಮಟ್ಟದ ಆರೋಗ್ಯ ಸೇವೆ ನಗರಗಳಿಗೆ ಮಾತ್ರ ಲಭ್ಯವಾಗುತ್ತದೆ. ಹಳ್ಳಿಗಳಿಗೆ ತೆರಳಿ ಸೇವೆ ಮಾಡುವ ವೈದ್ಯರ ಕೊರತೆಯಿದೆ. ವೈದ್ಯರು ಸೇವೆಯ ಮಹತ್ವ ಅರಿತು ಕೆಲಸ ಮಾಡುವ ಮನೋಭಾವ ಬೆಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪುರಾತನ ಕಾಲದಿಂದಲೂ ವೈದ್ಯರನ್ನು ದೇವರೆಂದೇ ಪರಿಗಣಿಸಲಾಗುತ್ತಿದೆ. ಸಮಾಜಕ್ಕೆ ದೊಡ್ಡ ಕೊಡುಗೆ ನೀಡುವ ವೈದ್ಯರಿಗೆ ದಯಾಗುಣವೇ ಮುಖ್ಯವಾಗಿರಬೇಕು. ರೋಗಿಗಳ ಮೇಲೆ ಕರುಣೆಯಿದ್ದರೆ ಮಾತ್ರ ಉತ್ತಮ ವೈದ್ಯರಾಗುಲು ಸಾಧ್ಯ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement