ಜಿಲ್ಲಾ ಸುದ್ದಿ

ಕಳೇಬರವಾಗಿ ಹೊರ ಬಂದ ತಿಮ್ಮಣ್ಣ...

ಕೊಳವೆ ಬಾವಿಗೆ ಬಿದ್ದ ತಿಮ್ಮಣ್ಣನನ್ನು ಮೇಲೆತ್ತುವ ಕಾರ್ಯಾಚರಣೆ ಯಶಸ್ವಿಯಾಯಿತಾದರೂ..

ಸೂಳಿಕೇರಿ: ಕೊಳವೆ ಬಾವಿಗೆ ಬಿದ್ದ ತಿಮ್ಮಣ್ಣನನ್ನು ಮೇಲೆತ್ತುವ ಕಾರ್ಯಾಚರಣೆ ಯಶಸ್ವಿಯಾಯಿತಾದರೂ, ತಿಮ್ಮಣ್ಣನು ಮಾತ್ರ ಬದುಕಿ ಬರಲಿಲ್ಲ.

ಹೌದು, ಕಳೆದ ಒಂದು ವಾರದ ಹಿಂದೆ ಕೊಳವೆ ಬಾವಿಗೆ ಬಿದ್ದಿದ್ದ ತಿಮ್ಣಣ್ಣನ ಕಳೇಬರವನ್ನು ಹೊರತೆಗೆಯಲಾಗಿದೆ.

ಮೊನ್ನಯಷ್ಟೇ ತಿಮ್ಮಣ್ಣನ್ನು ಮೃತಪಟ್ಟಿರುವುದಾಗಿ ಘೋಷಿಸಿದ ಸರ್ಕಾರ, ತಿಮ್ಮಣ್ಣ ಪೋಷಕರ ಮನವಿಗೆ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು . ಆದರೆ ಕಾನೂನು ತಜ್ಞರ ಸಲಹೆ ಮೇರೆಗೆ ಮತ್ತೆ ಕಾರ್ಯಾಚರಣೆ ಆರಂಭಿಸಿ, ತಿಮ್ಮಣ್ಣನ ಮೃತದೇಹವನ್ನು ಹೊರತೆಗೆದಿದೆ.

ರಾತ್ರಿ 1.50ರ ಸುಮಾರಿಗೆ ತಿಮ್ಮಣ್ಣನ ಕಳೇಬರವನ್ನು ಹೊರಕ್ಕೆ ತೆಗೆಯಲಾಗಿದ್ದು, ಸ್ಥಳದಲ್ಲೇ ಜಿಲ್ಲಾಸ್ಪತ್ರೆ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ತದ ನಂತರ ತಿಮ್ಮಣ್ಣನ ಕಳೇಬರವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ.

ರಾತ್ರಿ 2.20ಕ್ಕೆ ಸೂಳಿಕೇರಿ ಜಮೀನಿನಲ್ಲಿ ಕೊಳವೆ ಬಾವಿಯ 100 ಮೀಟರ್ ಅಂತರದಲ್ಲಿ ತಿಮ್ಮಣ್ಣನ ಅಂತ್ಯಕ್ರಿಯೆ ನೆರೆವೇರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್ ಪಾಟೀಲ್, ಶಾಸಕ ಹೆಚ್.ವೈ ಮೇಟಿ, ಡಿಸಿ ಮೇಘಣ್ಣವರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!