ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಆಗಸ್ಟ್ 15ರಿಂದ 5ನೇ ಅಂತರಾಷ್ಟ್ರೀಯ ಜ್ಯೋತಿಷ್ಯ ವಿಜ್ಞಾನ ಸಮ್ಮೇಳನ

Vishwanath S
Updated On : 12 Aug 2014, 5:38 am

ಬೆಂಗಳೂರು: ದಿವ್ಯ ಜ್ಯೋತಿ ಕಾಲೇಜ್ ಆಫ್ ಆಸ್ಟ್ರಾಲಜಿ ಆಯೋಜಿಸಿರುವ 5ನೇ ಅಂತರಾಷ್ಟ್ರೀಯ ಜ್ಯೋತಿಷ್ಯ ವಿಜ್ಞಾನ ಸಮ್ಮೇಳನ ಇದೇ ಆಗಸ್ಟ್ 15 ರಿಂದ 17 ರವರೆಗೆ ನಡೆಯಲಿದೆ.

ನಗರದ ಶಿಕ್ಷಕರ ಭವನದಲ್ಲಿ ಆ ಕಾರ್ಯಕ್ರಮವನ್ನು ನಡೆಯಲಿದ್ದು, ಈ ಕಾರ್ಯಕ್ರಮವನ್ನು ಬೇಲಿ ಮಠದ ಶಿವರುದ್ರ ಮಹಾ ಸ್ವಾಮೀಜಿ ಅವರು ಉದ್ಘಾಟಿಸಲಿದ್ದಾರೆ.

ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಾ.ಟಿ.ಎಸ್.ವಾಸನ್ ಅವರು, ಖಗೋಳಶಾಸ್ತ್ರದ ಒಂದು ಭಾಗವಾಗಿರುವ ಜ್ಯೋತಿಷ್ಯ ಶಾಸ್ತ್ರವು ವೈಜ್ಞಾನಿಕವಾಗಿ ರಚಿತವಾಗಿದೆ. ಈ ಕಾರಣದಿಂದಲೇ ಪ್ರಸಕ್ತ ಸಾಲಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲೂ ಜ್ಯೋತಿಷ್ಯ ಶಾಸ್ತ್ರಕ್ಕೆ ಸಂಸ್ಕೃತ ವಿಶ್ವವಿದ್ಯಾಲಯದಗಳಲ್ಲಿ ಸ್ಥಾನ ದೊರೆತಿದ್ದು, ಜ್ಯೋತಿಷ್ಯ ಶಾಸ್ತ್ರ ಇಂದು ವಿಶ್ವವಿದ್ಯಾಲಗಳ ಪಠ್ಯಕ್ರಮಕ್ಕೆ ಸೇರ್ಪಡೆಯಾಗಿದೆ ಎಂದು ಹೇಳಿದರು.

ಬಳಿಕ ಮಾತನಾಡಿದ ದಿವ್ಯ ಜ್ಯೋತಿ ಕಾಲೇಜ್ ಆಫ್ ಆಸ್ಟ್ರಾಲಜಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗಜೇಂದ್ರ ಅವರು, ಜ್ಯೋತಿಷ್ಯ ವಿಜ್ಞಾನದ ಮಹತ್ವ ಹಾಗೂ ವಿಶೇಷತೆ, ಜಾತಕನ ಭಾವಗಳ ವಿಶ್ಲೇಷಗಳನ್ನು ಜನರಿಗೆ ತಿಳಿಯಪಡಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಆಗಸ್ಟ್ 15 ರಿಂದ 17 ರವರೆಗೆ ನಡೆಯಲಿರುವ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಜ್ಯೋತಿಷ್ಯ ಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕಗಳು, ಸಾಫ್ಟ್‌ವೇರ್, ವಾಸ್ತು ಮತ್ತು ಸಂಖ್ಯಾ ಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥಗಳು , ಫೆಂಗ್ ಶುಯಿ ಗ್ಯಾಜೆಟ್‌ಗಳು , ಹರಳುಗಳನ್ನು ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಮಾಡಲಾಗಿದೆ.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜ್ಯೋತಿಷ್ಯ ಮಹಾಸಾಗರ ಪ್ರೊ. ಕಲ್ಯಾಣ ರಾಮನ್ ಐಪಿಎಸ್, ಮೇಯರ್ ಕಟ್ಟೆ ಸತ್ಯನಾರಾಯಣ , ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಉಪಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಹಾಗು  ಖ್ಯಾತ ಜ್ಯೋತಿಷ್ಯ ತಜ್ಞರಾದ ಡಾ.ಎನ್.ಎಸ್.ಮೂರ್ತಿ ಅವರು ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement