ಆಗಸ್ಟ್ 15ರಿಂದ ಶ್ರೀ ಶಂಕರ ಮೇಳ
ಬೆಂಗಳೂರು: ಶ್ರೀ ಶಂಕರ ಸಂಸ್ಥೆಯು ಆಗಸ್ಟ್ 15 ರಿಂದ 17 ರವರೆಗೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಶ್ರೀ ಶಂಕರ ಮೇಳವನ್ನು ಆಯೋಜಿಸಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಶಂಕರ ಸಂಸ್ಥೆಯ ಕಾರ್ಯಕಾರಿ ಸದಸ್ಯ ಶ್ರೀನಿವಾಸ್ ಸ್ವಾತಂತ್ರ್ಯ, ಸಂಸ್ಕೃತಿ ಬಗೆಗಿನ ಸದಭಿರುಚಿಗಳ ಅಭಿಪ್ರಾಯವೇ ಕಾರ್ಯಕ್ರಮದ ಉದ್ದೇಶವಾಗಿದ್ದು, ಸ್ವಾತಂತ್ರ್ಯ ದಿನವಾದ ಆಗಸ್ಟ್ 15 ರಿಂದ 3 ದಿನಗಳ ಕಾಲ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಜನೆ ಸಹಸ್ರನಾಮ, 'ಭಾರತ ಜನನಿ' ರಸ ಪ್ರಶ್ನೆ ಹಾಗೂ ಜಾಗೋ ಭಾರತ್ ಕಾರ್ಯಕ್ರಮಗಳನ್ನು ಚಕ್ರವರ್ತಿ ಸೂಲಿಬೆಲೆ ನಡೆಸಿಕೊಡಲಿದ್ದಾರೆ. ಈ ವೇದಿಕೆಯಲ್ಲಿ ಸುಮಾರು 25 ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಕಾರ್ಗಿಲ್ ಯುದ್ಧದಲ್ಲಿ ತೊಡಗಿದ್ದ ಯೋಧರು ಸೇರಿದಂತೆ ರಾಜಕೀಯ ಗಣ್ಯರು ಭಾಗಿಯಾಗಲಿದ್ದು, ಆಗಸ್ಟ್ 16 ರಂದು ಕರ್ನಾಟಕ ಆರಕ್ಷಕರಿಗೆ ಗೌರವ ಸಮಾರ್ಪಣೆ ಸೇರಿದಂತೆ, ದೇಶಕ್ಕೆ ಸೇವೆ ಸಲ್ಲಿಸಿದ ಬೆಂಗಳೂರಿನ ಇತರ ನಾಗರೀಕರಿಗೆ ಬಹುಮಾನ ವಿತರಣೆಯನ್ನು ಮಾಡಲಾಗುವುದು.