ಕಾಂಗ್ರೆಸ್ ಮುಖಂಡರು ಡಿಕೆಶಿಗೆ ಆಹಾರ ನೀಡುತ್ತಿಲ್ಲ: ಶೆಟ್ಟರ್
ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಆಹಾರ ನೀಡು...
ಬಳ್ಳಾರಿ: ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಆಹಾರ ನೀಡುತ್ತಿಲ್ಲ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.
ಸೋಮಶೇಖರ ರೆಡ್ಡಿ ನಿವಾಸಕ್ಕೆ ಡಿಕೆಶಿ ಭೇಟಿ ವಿಚಾರ ಕುರಿತು ಪ್ರತಿಕ್ರಯಿಸಿರುವ ಬಿಜೆಪಿ ನಾಯಕ ಶೆಟ್ಟರ್, ಬಳ್ಳಾರಿಯಲ್ಲಿ ಬಿಜೆಪಿ ಒಡೆದ ಮನೆಯಂತಾಗಿದೆ ಎಂದು ಹೇಳಿದ್ದಾರೆ.
ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಒಡೆದ ಮನೆಯಂತಾಗಿದೆ. ಕಾಂಗ್ರೆಸ್ ಮುಖಂಡರು ಡಿಕೆಶಿಯನ್ನು ಮನೆಗೆ ಕರೆಯುತ್ತಿಲ್ಲ. ಸಚಿವ ಡಿಕೆ ಶಿವಕುಮಾರ್ಗೆ ಊಟ ನೀರು ಕೊಡುತ್ತಿಲ್ಲ ಎಂದು ಶೆಟ್ಟರ್ ತಿಳಿಸಿದ್ದಾರೆ.
ಹೀಗಾಗಿ, ಡಿಕೆಶಿ ಹಸಿವಿನಿಂದ ಸೋಮಶೇಖರ ರೆಡ್ಡಿ ನಿವಾಸಕ್ಕೆ ಭೇಟಿ ನೀಡಿದ್ದಾರೆ ಎಂದ ಅವರು, ಬಳ್ಳಾರಿಯಲ್ಲಿ ಬಿಜೆಪಿ ಗಟ್ಟಿಯಾಗಿದೆ ಎಂದಿದ್ದಾರೆ.
ಡಿಕೆಶಿ ಆಟ ಬಳ್ಳಾರಿಯಲ್ಲಿ ನಡೆಯುವುದಿಲ್ಲ. ಆಮಿಷ ಒಡ್ಡುವುದನ್ನು ಡಿಕೆಶಿ ನಿಲ್ಲಿಸಲಿ, ಏಕೆಂದರೆ ಬಳ್ಳಾರಿಯಲ್ಲಿ ಬಿಜೆಪಿ ಗಟ್ಟಿಯಾಗಿದೆ ಎಂದು ಶೆಟ್ಟರ್ ಹೇಳಿದ್ದಾರೆ.