ಶೋಭಾ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಶೃತಿ ನಿರ್ಧಾರ
ಮನೆಕೆಲಸದಾಕೆ ಶೋಭಾ ವಿರುದ್ಧ ಕ್ರಿಮಿನಲ್ ಮೊಕದ್ದಮೆ...
ಬೆಂಗಳೂರು: ಮನೆಕೆಲಸದಾಕೆ ಶೋಭಾ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ನಟಿ ಶೃತಿ ನಿರ್ಧರಿಸಿದ್ದಾರೆ.
ನಟಿ ಶೃತಿ ವಿರುದ್ಧ ಮನೆಕೆಲಸದಾಕೆಗೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಶೃತಿ ಅವರು ಶೋಭಾ ವಿರುದ್ಧ ಕ್ರಿಮಿನಲ್ ಮತ್ತು ಮಾನನಷ್ಟ ಮೊಕದ್ದಮೆ ದಾಖಲಿಸಲು ನಿರ್ಧರಿಸಿದ್ದಾರೆ.
ನಾಳೆ ಶೋಭಾ ವಿರುದ್ಧ ಮೊಕದ್ದಮೆ ದಾಖಲಿಸುತ್ತೇನೆ ಎಂದು ನಟಿ ಶೃತಿ ಹೇಳಿದ್ದಾರೆ.
ಶೃತಿಯ ವಿಚ್ಛೇದಿತ ಪತಿ ಚಂದ್ರಚೂಡ ಜೊತೆ ಶೋಭಾ ನಿರಂತರ ಫೋನ್ ಸಂಪರ್ಕದಲ್ಲಿರುವುದು ಪೊಲೀಸ್ ತನಿಖೆ ವೇಳೆ ಸಾಬೀತಾಗಿದೆ ಎಂದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಶೃತಿ ಅವರು ಶೋಭಾ ವಿರುದ್ಧ ಮೊಕದ್ದಮೆ ದಾಖಲಿಸಲು ಮುಂದಾಗಿದ್ದಾರೆ.
ಶೋಭಾ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ, ನಂಬಿಕೆ ದ್ರೋಹ ಮಾಡಿದ್ದಾಳೆ. ಇದರಿಂದ ಸಮಾಜದಲ್ಲಿ ನನ್ನ ಮರ್ಯಾದೆಗೆ ಧಕ್ಕೆಯಾಗಿದೆ. ಶೋಭಾ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿರವ ಸಂಬಂಧ ನನ್ನ ಬಳಿ ದಾಖಲೆಗಳಿವೆ. ಪೊಲೀಸರ ಮುಂದೆ ಶೋಭಾ ಸತ್ಯ ಒಪ್ಪಿಕೊಂಡಿದ್ದಾಳೆ ಎಂದು ಶೃತಿ ತಿಳಿಸಿದ್ದಾರೆ.