ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಕೆಪಿಎಸ್ಸಿ ಆಯ್ಕೆಯಲ್ಲಿ ಸಿಎಂ ಪ್ರಭಾವ

ಕೆಪಿಎಸ್ಸಿ 2011ರಲ್ಲಿ ಪತ್ರಾಂಕಿತ ಹುದ್ದೆಗಳಿಗೆ ನಡೆದ ಪರೀಕ್ಷೆ ವೇಳೆ, ಕೆಪಿಎಸ್ಸಿ ಮಾಜಿ ಸದಸ್ಯೆ ಮಂಗಳ...

Mainashree
Updated On : 13 Aug 2014, 11:29 am

-ಕೆಪಿಎಸ್ಸಿ ಮಾಜಿ ಸದಸ್ಯೆ ಮಂಗಳ ಶ್ರೀಧರ್‌ಗೆ ಸಿದ್ದರಾಮಯ್ಯ ದೂರವಾಣಿ ಕರೆ

ಬೆಂಗಳೂರು:
ಕೆಪಿಎಸ್ಸಿ 2011ರಲ್ಲಿ ಪತ್ರಾಂಕಿತ ಹುದ್ದೆಗಳಿಗೆ ನಡೆದ ಪರೀಕ್ಷೆ ವೇಳೆ, ಕೆಪಿಎಸ್ಸಿ ಮಾಜಿ ಸದಸ್ಯೆ ಮಂಗಳ ಶ್ರೀಧರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಬಾರಿ ದೂರವಾಣಿ ಕರೆ ಮಾಡಿ ತಮ್ಮವರು ಆಯ್ಕೆ ಮಾಡಿಕೊಳ್ಳುವಂತೆ ಪ್ರಭಾವ ಬೀರಿದ್ದಾರೆ ಎಂದು ಅಭ್ಯರ್ಥಿಗಳ ಪರ ವಕೀಲ ಡಾ.ಸಿ.ಎಸ್.ದ್ವಾರಕನಾಥ್ ಮಂಗಳವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಆರೋಪಿಸಿದ್ದಾರೆ.

ದ್ವಾರಕನಾಥ್ ಹೇಳಿದ್ದು
2013ರ ಮಾ.21 ರಂದು ಮಂಗಳ ಶ್ರೀಧರ್ ಸಹಾಯಕ ಸಿಬ್ಬಂಧಿಗೆ ಸಿದ್ದರಾಮಯ್ಯ ದೂರವಾಣಿ ಕರೆ ಮಾಡಿ ತಮಗೆ ಬೇಕಾದ ಅಭ್ಯರ್ಥಿಗಳ ಪರವಾಗಿ ಲಾಬಿ ನಡೆಸಿದ್ದಾರೆ. ಅಲ್ಲದೆ, ಮಂಗಳ ಶ್ರೀಧರ್ ಮನೆಗೆ ಸಿಎಂ ಸಂಬಂಧಿಕರು ಹಲವು ಬಾರಿ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಪರೀಕ್ಷೆ ಬರೆದ 1.34 ಲಕ್ಷ ಅಭ್ಯರ್ಥಿಗಳ ಪೈಕಿ 18 ಮಂದಿ ಗಂಗಾಧರ ಎಂಬ ಹೆಸರಿನವರಿದ್ದಾರೆ. ಇದರಲ್ಲಿ ಕೆಪಿಎಸ್ಸಿಯಲ್ಲಿ ಅಕ್ರಮ ನಡೆದಿದೆ ಎಂದು ದೂರು ಕೊಟ್ಟ ಗಂಗಾಧರ್ ಯಾರು ಎಂಬುದನ್ನು ಇಲ್ಲಿಯವರೆಗೂ ಸಿಐಡಿಗೆ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಅಲ್ಲದೆ, ಡಾ.ಮೈತ್ರಿ ಕೊಟ್ಟ ದೂರನ್ನೇ ಆಧಾರ ಮಾಡಿಕೊಂಡು 360 ಮಂದಿಯ ಭವಿಷ್ಯಕ್ಕೆ ಕಲ್ಲು ಹಾಕುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಡಾ.ಮೈತ್ರಿಗೆ ಸಹಾಯಕ ಕಮಿಷನರ್ (ಎಸಿ) ಹುದ್ದೆ ನೀಡುವಂತೆ ಕೆಪಿಎಸ್ಸಿಗೆ ಸಚಿವ ಸತೀಶ್ ಜಾರಕಿಹೋಳಿ ಅಕ್ರಮ ಪತ್ರ ಬರೆದಿದ್ದಾರೆ ಎಂದು ಪ್ರತಿಯೊಂದನ್ನು ಪ್ರದರ್ಶಿಸಿದರು. ಇಲಾಖೆಯಲ್ಲಿ ಸಾಚಾ ಎಂದು ಹೇಳಿಕೊಳ್ಳುವ ಡಾ.ಮೈತ್ರಿ ಅವರ ತಂದೆ ರಾಮನಗರ ಉಪ ವಿಭಾಗಾಧಿಕಾರಿ ಸಿದ್ದಪ್ಪ ಅವರ ಮನೆಯ ಮೇಲೆ ಮೂರು ಬಾರಿ ಲೋಕಾಯುಕ್ತ ದಾಳಿ ನಡೆದಿದೆ. ಹೀಗಾಗಿ ದೂರುಕೊಟ್ಟಿರುವ ಮೈತ್ರಿಯವರು ವೈಯಕ್ತಿಕ ಹಿತಾಸಕ್ತಿಗಾಗಿ ಬಡ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯ ಮಾಡದಂತೆ ಸರ್ಕಾರವನ್ನು ಒತ್ತಾಯಿಸಿದರು.

ಕೆಪಿಎಸ್ಸಿ ಆಯ್ಕೆ ಪಟ್ಟಿಯನ್ನು ರದ್ದುಪಡಿಸಿರುವ ಸರ್ಕಾರ ನಿರ್ಧಾರ ಖಂಡಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ನೊಂದ ಅಭ್ಯರ್ಥಿಗಳು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 25ನೇ ದಿನಕ್ಕೆ ಕಾಲಿಟ್ಟಿದೆ. ಮಂಗಳವಾರ ಕೂಡಾ ಜೆಡಿಎಸ್ ಮುಖಂಡರು ಸೇರಿದಂತೆ ಹಲವು ಕನ್ನಡ ಸಂಘಟನೆಗಳ ಮುಖಂಡರು ಭೇಟಿ ನೀಡಿ ಬೆಂಬಲ ಸೂಚಿಸಿದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement