ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಬೆಂಗಳೂರಿನ ಮತ್ತೆ ಐದು ಕಡೆ ಉಚಿತ ವೈ-ಫೈ

ಮುಂದಿನ ಆರು ತಿಂಗಳ ಅವಧಿಯಲ್ಲಿ ಸಂಪೂರ್ಣ ಸಾರ್ವಜನಿಕ ವೈ-ಫೈ ಹೊಂದಿದ ದೇಶದ ಪ್ರಥಮ ನಗರವಾಗಿ...

Mainashree
Updated On : 13 Aug 2014, 10:54 am

ಬೆಂಗಳೂರು: ಮುಂದಿನ ಆರು ತಿಂಗಳ ಅವಧಿಯಲ್ಲಿ ಸಂಪೂರ್ಣ ಸಾರ್ವಜನಿಕ ವೈ-ಫೈ ಹೊಂದಿದ ದೇಶದ ಪ್ರಥಮ ನಗರವಾಗಿ ಬೆಂಗಳೂರು ಹೊರಹೊಮ್ಮಲಿದೆ ಎಂದು ಐಟಿ, ಬಿಟಿ ಸಚಿವ ಡಾ.ಎಸ್.ಆರ್.ಪಾಟೀಲ್ ಹೇಳಿದ್ದಾರೆ.

ನ್ಯಾಸ್ಕಾಂ, ಎನ್‌ಎಸ್‌ಡಿಸಿ, ಎನ್‌ಐಇಎಲ್ ಐಟಿ ಸೇರಿದಂತೆ ವಿವಿಧ ಸಂಸ್ಥೆಗಳ ಜತೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಪ್ರಮುಖ ನಗರಗಳಿಗೆ ವೈ-ಫೈ ವಿಸ್ತರಿಸಲು ಸರ್ಕಾರ ನಿರ್ಧರಿಸಿದ್ದು, ಆಸಕ್ತ ಸಂಸ್ಥೆಗಳಿಗೆ ಎಕ್ಸ್ ಪ್ರೆಶನ್ ಆಫ್ ಇಂಟರೆಸ್ಟ್ (ಇಓಐ) ಪ್ರಕಟಣೆ ಹೊರಡಿಸಿದೆ.

ಆರು ಸಂಸ್ಥೆಗಳು ಇದಕ್ಕೆ ಪ್ರತಿಕ್ರಿಯಿಸಿದ್ದು, ಮೌಲ್ಯ ಮಾಪನ ಮುಗಿದ ನಂತರ ಸರ್ವಿಸ್ ಪ್ರೊವೈಡರ್ ಆಯ್ಕೆಗೆ ಪ್ರಸ್ತಾವ ಸಲ್ಲಿಸಲಾಗುವುದು. ಈ ಎಲ್ಲ ಪ್ರಕ್ರಿಯೆ ಮುಗಿಯುವುದಕ್ಕೆ ಆರು ತಿಂಗಳು ಬೇಕು ಎಂದರು.
ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಶಾಂತಿ ನಗರ ಬಸ್ ನಿಲ್ದಾಣ, ಕೋರಮಂಗಲ ಬಸ್ ನಿಲ್ದಾಣ, ಯಶವಂತಪುರ ಬಸ್ ನಿಲ್ದಾಣ, ಸಿಎಂಎಚ್ ರಸ್ತೆಯಲ್ಲಿ ಈಗಾಗಲೇ ಉಚಿತ ವೈ-ಫೈ ಸೌಲಭ್ಯ ನೀಡಲಾಗಿದೆ. ಇನ್ನೂ ಆರು ಕಡೆ ಈ ಸೇವೆ ಸೌಲಭ್ಯ ನೀಡಲಾಗಿದೆ. ಇನ್ನೂ ಆರು ಕಡೆ ಈ ಸೇವೆ ವಿಸ್ತರಿಸಲು ಇಲಾಖೆ ನಿರ್ಧರಿಸಿದೆ.

ಕೆಂಗೇರಿ ಟಿಟಿಎಂಸಿ, ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ, ಶಿವಾಜಿನಗರ, ಜಯನಗರ, ಬನಶಂಕರಿ ಮತ್ತು ವಿಜಯನಗರಕ್ಕೆ ಈ ಸೌಲಭ್ಯ ವಿಸ್ತರಿಸಲಾಗುವುದು. 512 ಕೆಬಿಪಿಎಸ್ ವೇಗದ ಬ್ಯಾಂಡ್‌ವಿಡ್ತ್ ವೈಫೈ ಸೌಲಭ್ಯ ನೀಡಲಾಗುವುದು. ಬಳಕೆದಾರರ ಸೆಲ್ ಫೋನ್‌ಗೆ ಎ 8 ಡಿಜಿಟ್ ಪಾಸ್‌ವರ್ಡ್ ಮೂಲಕ ಪ್ರಮಾಣೀಕರಿಸಲಾಗುವುದು. ಉಚಿತ ಮತ್ತು ಕಡಿಮೆ ಪ್ರಮಾಣದ ಶುಲ್ಕ ವಿಧಿಸುವ ಪ್ರೀಮಿಯಂ ಸೇವೆಗಳು ಲಭ್ಯ ಇರುತ್ತದೆ ಎಂದು ಹೇಳಿದರು.

ಕರ್ನಾಟಕ - ಐ4 ನೀತಿ ಅನ್ಯಯ ಮಾಹಿತಿ ತಂತ್ರಜ್ಞಾನ ಸಶಕ್ತ ಸೇವೆಗಳಿಗೆ 100 ರೂ ಕೋಟಿಗೂ ಮೇಲ್ಪಟ್ಟ ಹೂಡಿಕೆಗೆ ಅನುಮತಿ ನೀಡಲು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯ ಉನ್ನತಮಟ್ಟದ ಸಮಿತಿ ರಚಿಸಲಾಗಿದೆ.

ಇದಕ್ಕಿಂತ ಕಡಿಮೆ ಮೊತ್ತದ ಯೋಜನೆಗಳಿಗೆ ಐಟಿಬಿಟಿ ಇಲಾಖೆಯೇ ಅನುಮತಿ ನೀಡುತ್ತದೆ. ಜತೆಗೆ ಐಟಿ ಉದ್ಯಮಕ್ಕೆ ವಾಣಿಜ್ಯ ವಿದ್ಯುತ್ ಸುಂಕದ ಬದಲು ಕೈಗಾರಿಕಾ ವಿದ್ಯುತ್ ಸುಂಕ ಸೌಲಭ್ಯ ನೀಡಲು ನಿರ್ಧರಿಸಲಾಗಿದೆ ಎಂದರು.

ವಿಷನ್: 2020ರ ಹೊತ್ತಿಗೆ ರಾಜ್ಯದ ಐಟಿ ಉದ್ಯಮತ ಆದಾಯವನ್ನು 4000 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ. ಐಟಿ ಕ್ಷೇತ್ರದಿಂದ ನೇರ ಉದ್ಯೋಗವನ್ನು 20 ಲಕ್ಷಕ್ಕೆ, ಪರೋಕ್ಷ ಉದ್ಯೋಗವನ್ನು 80 ಲಕ್ಷಕ್ಕೆ ಹೆಚ್ಚಿಸುವ ಮಹಾತ್ವಾಕಾಂಕ್ಷೆ ಹೊಂದಿದ್ದೇವೆ.

ನಾವು ನೆರೆ ರಾಜ್ಯಗಳ ಜತೆ ಪೈಪೋಟಿಗೆ ಇಳಿದಿಲ್ಲ. ನಮ್ಮ ಸ್ಪರ್ಧೆ ಅಮೆರಿಕಾದ ಸಿಲಿಕಾನ್ ವ್ಯಾಲಿಯೊಂದಿಗೆ ಎಂದು ಹೇಳಿದರು. ನ್ಯಾ ಸ್ಕಾಂ ಸಹಭಾಗಿತ್ವದೊಂದಿಗೆ ರಾಜ್ಯ ಸರ್ಕಾರ ಸ್ಪಾರ್ಟ್ ಆಫ್ ವೇರ್ ಹೌಸನ್ನು ಸ್ಥಾಪಿಸಿದ್ದು, 6 ಕಂಪನಿಗಳು ಜಾಗತಿಕ ಮಾರುಕಟ್ಟೆಯನ್ನು ಒದಗಿಸುತ್ತಿವೆ. ದೇಶದ 500ಕ್ಕೂ ಹೆಚ್ಚು ಹಾಗೂ ರಾಜ್ಯದ 200ಕ್ಕೂ ಹೆಚ್ಚು ಕಂಪನಿಗಳ ಮೇಲೆ ಇದು ಪರಿಣಾಮ ಬೀರುತ್ತಿದೆ. ಮುಂದಿನ ಪೀಳಿಗೆ, ಭಾರತದ ಪ್ರಥಮ ಹ್ಯಾಕ್ಸಿಲರೇಟರ್ ಮತ್ತು ಇಂಟರ್ನೆಟ್ ಆಫ್ ಥಿಗ್ಸ್ (ಐಓಟಿ) ಸ್ಪಾರ್ಟ್ ಅಪ್ ಅನ್ನು 5 ಸಾವಿರ ಚದರ ಅಡಿ ವ್ಯಾಪ್ತಿಯಲ್ಲಿ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ ಎಂದರು.

ಬೃಹತ್ ಹೂಡಿಕೆ: 70 ಕ್ಕೂ ಹೆಚ್ಚು ದೇಶಗಳಲ್ಲಿ ಶಾಖೆ ಹೊಂದಿರುವ ಹನಿವೆಲ್ ಏರೋಸ್ಪೇಸ್, ರಕ್ಷಣೆ, ಅಟೋಮೇಶನ್, ಸಾರಿಗೆ ಸೇರಿ ವಿವಿಧ ಸೇವೆ ಒದಗಿಸುತ್ತಿದೆ. ಈ ಸಂಸ್ಥೆ ಬೆಂಗಳೂರಿನಲ್ಲಿ 1600 ಕೋಟಿ ಹೂಡಿಕೆ ಮಾಡಿದೆ. 1400 ಕೋಟಿ ಹೂಡಿಕೆಗೆ ಮತ್ತೆ ಮುಂದಾಗಿದ್ದು, ಸದ್ಯದಲ್ಲೇ ಉನ್ನತ ಮಟ್ಟದ ಸಮಿತಿ ಇದಕ್ಕೆ ಒಪ್ಪಿಗೆ ನೀಡಲಿದೆ ಎಂದರು. ಐಟಿಬಿಟಿ ಇಲಾಖೆ ಪ್ರಧಾನ ಕಾರ್ಯದರ್ಶಿ ರ್ಶೀವತ್ಸ ಕೃಷ್ಣ, ನಿರ್ದೇಶಕಿ ತನುಶ್ರೀ, ಎನ್‌ಎಸ್‌ಡಿಸಿಯ ಆರ್. ಚಂದ್ರಶೇಖರ್, ಎನ್‌ಐಇಎಲ್‌ಐಟಿಯ ನಿರ್ದೇಶಕ ಅಶ್ವಿನಿಕುಮಾರ್ ಶರ್ಮಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement