ಸಹೋದ್ಯೋಗಿಗೆ ಲೈಂಗಿಕ ಕಿರುಕುಳ: ಆರೋಪಿ ಶಾಂತರಾಜ್ ಬಂಧನ
ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಮೇಲೆ ಗ್ಯಾಸ್..
ತುಮಕೂರು: ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಮೇಲೆ ಗ್ಯಾಸ್ ಏಜೆನ್ಸಿ ಮ್ಯಾನೇಜರ್ ಶಾಂತರಾಜ್ನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ತುಮಕೂರಿನ ಶಾರದಾದೇವಿನಗರದಲ್ಲಿರುವ ಉದಯಶಂಕರ ಗ್ಯಾಸ್ ಏಜೆನ್ಸಿ ಮ್ಯಾನೇಜರ್ ಶಾಂತರಾಜ್ ಲೈಂಗಿಕ ಕಿರುಕುಳ ನೀಡಿದ್ದಾರೆಂದು 40 ವರ್ಷದ ಮಹಿಳೆ ದೂರು ನೀಡಿದ್ದರು.
ಹೊಸ ಬಡವಾಣ ಠಾಣೆ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಶಾಂತರಾಜ್ ಸಹೋದ್ಯೋಗಿ ದೂರು ದಾಖಲಿಸಿದ್ದರು.
ಜುಲೈ 1ರಂದು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿತ್ತು. ದೂರಿನ ಮೇರೆಗೆ ಶಾಂತರಾಜ್ ಅವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಶಾಂತರಾಜ್ ಅವರು ಮನೆಯಲ್ಲಿ ಚುಂಬಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿರುವ ಮಹಿಳೆ, ಪೊಲೀಸರಿಗೆ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ದೂರಿದ್ದಾಳೆ.
ಶಾಂತ ವಿರುದ್ಧ ಸೆಕ್ಷನ್ 506, 354(ಎ) ಅಡಿ ಕೇಸ್ ದಾಖಲಿಸಿದ್ದು, ಐಪಿಸಿ ಸೆಕ್ಷನ್ 506-ಜೀವ ಬೆದರಿಕೆ ಐಪಿಸಿ ಸೆಕ್ಷನ್ 354(ಎ)-ಮಾನಭಂಗಕ್ಕೆ ಯತ್ನ ಮೊಕದ್ದಮೆ ಹೂಡಲಾಗಿದೆ.