68ನೇ ಸ್ವಾತಂತ್ರ್ಯ ದಿನಕ್ಕೆ ಡ್ರಮರ್ ಗೋಪಿ ಕೊಡುಗೆ
ಬೆಂಗಳೂರು: ಆಗಸ್ಟ್ 15ರ 68ನೇ ಸ್ವಾತಂತ್ರ್ಯದ ಅಂಗವಾಗಿ ಡ್ರಮರ್ ದೇವ ಹಾಗೂ ಡ್ರಮರ್ ಗೋಪಿಯವರು ಲಯವಾದ್ಯವಾಗಿರುವ ಡ್ರಮರ್ ಮೂಲಕ ರಾಷ್ಟ್ರೀಯ ಗೀತೆಯಾದ ಜನ ಗಣ ಮನ ಗೀತೆಯನ್ನು ನುಡಿಸಿ ಲೋಕಾರ್ಪಣೆ ಮಾಡಿದ್ದಾರೆ.
ಈ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡ್ರಮರ್ ಗೋಪಿ ಡ್ರಮರ್ ಮೂಲಕ ರಾಷ್ಟ್ರೀಯ ಗೀತೆಯನ್ನು ನುಡಿಸುವುದು ಸುಲಭದ ಕೆಲಸವಲ್ಲ. ಇದಕ್ಕೆ ಸಾಕಷ್ಟು ಸಂಶೋಧನೆಗಳನ್ನು ಮಾಡಿರಬೇಕು. ಇಂತಹ ಸಂಶೋಧನೆಯನ್ನು ಡ್ರಮರ್‌ಗಳಾದ ನಾನು ಮತ್ತು ದೇವ ಇಬ್ಬರು ಕೈ ಗೊಂಡು ಇಂತಹ ಸಾಧನೆಯನ್ನು ಮಾಡಿದ್ದೇವೆ. ಈ ಗೀತೆಯಲ್ಲಿ ಯಾವುದೇ ವಿದ್ಯುತ್ ವಾದ್ಯವಾಗಲಿ, ಯಾವುದೇ ಮೆಲಾಡಿಕ್ ವಾದ್ಯವಾಗಲಿ ಬಳಸಿಲ್ಲ ಎಂದು ತಿಳಿಸಿದರು.