ಆ.14ಕ್ಕೆ ಜಾಗೋಭಾರತ್ ಕಾರ್ಯಕ್ರಮ
ಬೆಂಗಳೂರು: ಕೆ.ಎಂ.ಡಬ್ಲ್ಯೂ.ಎ. ವಿದ್ಯಾನಿಕೇತನ್ ಮತ್ತು ಪಿ.ಯು ಕಾಲೇಜು ಆಗಸ್ಟ್ 14 ರಂದು ವೆಸ್ಟ್ಕಾರ್ಡ್ ರಸ್ತೆಯ, ಮಹಾಲಕ್ಷ್ಮಿಪುರಂನಲ್ಲಿ ಚಕ್ರವರ್ತಿ ಸೂಲಿಬೆಲೆ ಸಾರಥ್ಯದಲ್ಲಿ ಜಾಗೋ ಭಾರತ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
68ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮವು ಕೆ.ಎಂ.ಡಬ್ಲ್ಯೂ.ಎ. ವಿದ್ಯಾನಿಕೇತನ್ ಮತ್ತು ಪಿ.ಯು ಕಾಲೇಜು ಆವರಣದಲ್ಲಿ ನಡೆಯಲಿದ್ದು, ವಿದ್ಯಾರ್ಥಿಗಳಲ್ಲಿ ದೇಶ ಭಕ್ತಿ ಕೊರತೆಯನ್ನು ನೀಗಿಸುವ ಸಲುವಾಗಿ ಹಮ್ಮಿಕೊಂಡಿರವ ಈ ಕಾರ್ಯಕ್ರಮವನ್ನು ಚಕ್ರವರ್ತಿ ಸೂಲಿಬೆಲೆ ಹಾಗೂ ಅವರ ತಂಡದವರು ಜಾಗೋ ಭಾರತ್ ಎಂಬ ವಿಶೇಷ ಕಾರ್ಯಕ್ರಮದ ಮೂಲಕ ನಡೆಸಿಕೊಡಲಿದ್ದಾರೆ.
ಕಾರ್ಯಕ್ರಮದಲ್ಲಿ ವಿಧಾನ ಸಭಾ ಸದಸ್ಯ ಕೆ.ಗೋಪಾಲಯ್ಯ, ಬಿಬಿಎಂಪಿ ಸದಸ್ಯ ಎಸ್.ಹರೀಶ್ ಹಾಗೂ ವಿದ್ಯಾನಿಕೇತನ ಕೆ.ಎಂ.ಡಬ್ಲ್ಯೂ.ಎ. ಎಸ್.ಮನೋಜ್ ಕುಮಾರ್ ರಣ್ಣೊರೆ ಉಪಸ್ಥಿತಿ ವಹಿಸಲಿದ್ದಾರೆ.