ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಕಾರ್ಪೊರೇಟರ್ ಸೊಸೆ ಕಿಡ್ನಾಪ್‌ಗೆ ಯತ್ನ

ಕಾರ್ಪೊರೇಟರ್ ಗೋವಿಂದೇಗೌಡರ ಸೊಸೆಯನ್ನು ಪಾನಮತ್ತ ಕಿಡಿಗೇಡಿಗಳು ಕಿಡ್ನಾಪ್...

ಕಾರ್ಪೋರೇಟರ್ ಗೋವಿಂದೇಗೌಡ ಅವರ ಮಗ ಸುರೇಶ್
Mainashree
Updated On : 14 Aug 2014, 7:55 am

ಬೆಂಗಳೂರು: ಕಾರ್ಪೊರೇಟರ್ ಗೋವಿಂದೇಗೌಡರ ಸೊಸೆಯನ್ನು ಪಾನಮತ್ತ ಕಿಡಿಗೇಡಿಗಳು ಕಿಡ್ನಾಪ್ ಮಾಡಲು ಯತ್ನಿಸಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ನಿನ್ನೆ ರಾತ್ರಿ ಸುಮಾರು 11.30ರಲ್ಲಿ ಶಿವಾನಂದ ಸರ್ಕಲ್‌ನಲ್ಲಿರುವ ಹೋಟೆಲ್‌ನಲ್ಲಿ ಗೋವಿಂದೇಗೌಡರ ಮೊಮ್ಮಗನ ಬರ್ತ್‌ಡೇ ಪಾರ್ಟಿ ಮುಗಿಸಿಕೊಂಡು ಮನೆಗೆ ಹೊರಟ ವೇಳೆ ಈ ಘಟನೆ ಸಂಭವಸಿದೆ ಎಂದು ತಿಳಿದು ಬಂದಿದೆ.

ಹೆಗ್ಗನಹಳ್ಳಿ ಕಾರ್ಪೋರೇಟರ್ ಗೋವಿಂದೇಗೌಡ ಅವರ ಸೊಸೆ ಮಾನಸ ಅವರನ್ನು ಪಾನಮತ್ತಿನಲ್ಲಿದ್ದ ಕಾಮುಕರು ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ.

ಬರ್ತ್‌ಡೇ ಪಾರ್ಟಿ ಅಂಗವಾಗಿ ಶಿವಾನಂದ ಸರ್ಕಲ್ ಬಳಿ ಇರುವ ಹೋಟೆಲ್‌ವೊಂದರಲ್ಲಿ ಬರ್ತ್‌ಡೇ ಪಾರ್ಟಿ ಆಯೋಜಿಸಲಾಗಿತ್ತು. ಪಾರ್ಟಿ ಮುಗಿಸಿ ಎಲ್ಲರೂ ಹೊರಟ ನಂತರ ನಾವು ಹೊರಟೆವು. ಆ ವೇಳೆ ಇಂಡಿಕಾ ಕಾರಿನಲ್ಲಿ ವೇಗವಾಗಿ ಬಂದ ಕಿಡಿಗೇಡಿಗಳು ನನ್ನ ಪತ್ನಿ ಬಳಿ ಅಸಭ್ಯವಾಗಿ ವರ್ತಿಸಿದರು. ಅದನ್ನು ಪ್ರಶ್ನಿಸಲು ಮುಂದಾದಾಗ, ಚಾಕು ತೋರಿಸಿ ಬೆದರಿಸಿದರು. ಆಕೆಯನ್ನು ಅಪಹರಿಸಲು ಯತ್ನಿಸಿದರು. ಅಷ್ಟರಲ್ಲಿ, ಅಲ್ಲೇ ಇದ್ದ ಸಾರ್ವಜನಿಕರು ಕಿಡಿಗೇಡಿಗಳನ್ನು ಹಿಡಿದು ಥಳಿಸಿದ್ದಾರೆ ಎಂದು ಗೋವಿಂದೇಗೌಡರ ಮಗ ಸುರೇಶ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement