ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಕ್ಷಿಪ್ರ ಕಾರ್ಯಾಚರಣೆ: ಬಾಲಕನ ರಕ್ಷಣೆ

ಅಪಹರಣಕಾರರ ಮೇಲೆ ಗುಂಡಿನ ದಾಳಿ ನಡೆಸಿದ ಪೊಲೀಸರು ಮೂವತ್ತು ಲಕ್ಷ..

Vishwanath S
Updated On : 14 Aug 2014, 10:18 am

ಬೆಂಗಳೂರು: ಅಪಹರಣಕಾರರ ಮೇಲೆ ಗುಂಡಿನ ದಾಳಿ ನಡೆಸಿದ ಪೊಲೀಸರು ಮೂವತ್ತು ಲಕ್ಷ ರುಪಾಯಿ ಒತ್ತೆ ಹಣಕ್ಕಾಗಿ ಅಪಹರಿಸಲಾಗಿದ್ದ ಜವಳಿ ಉದ್ಯಮಿಯ ಪುತ್ರನನ್ನು ಸುರಕ್ಷಿತವಾಗಿ ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಚಿಕ್ಕಪೇಟೆಯಲ್ಲಿ ಟೆಕ್ಸ್‌ಟೈಲ್ ಮಳಿಗೆ ಹೊಂದಿರುವ ಕಾಟನ್‌ಪೇಟೆ ಸುಬ್ರಮಣ್ಯ ಕಾಲೋನಿ ನಿವಾಸಿ ರಾಜಸ್ಥಾನ ಮೂಲದ ಅಮನ್ ರಾಮ್ ಅವರ ಪುತ್ರ ವಿಕಾಸ್(6)ನನ್ನು ರಾಜಸ್ಥಾನ ಮೂಲದವರೇ ಆದ ಧರ್ಮರಾಂ(23) ಹಾಗೂ ಜಿತೇಂದ್ರ(20) ಅಪಹರಿಸಿದ್ದರು. ಮಗುವನ್ನು ರಕ್ಷಿಸಲು ಹೋದ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರಿಂದ ಕಾಟನ್‌ಪೇಟೆ ಠಾಣೆ ಪೇದೆಗಳಾದ ಆಸ್ಗರ್ ಅಲಿ ಹಾಗೂ ಮುನಿರಾಜು ಗಾಯಗೊಂಡಿದ್ದಾರೆ.

ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದಾಗ ಆರೋಪಿಗಳಿಬ್ಬರೂ ಗಾಯಗೊಂಡಿದ್ದಾರೆ. ನಾಲ್ವರನ್ನೂ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪಶ್ಚಿಮ ವಿಭಾಗ ಕಾನೂನು ಸುವ್ಯವಸ್ಥೆ ಜಂಟಿ ಪೊಲೀಸ್ ಆಯುಕ್ತ ಎಸ್ ರವಿ ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement