ಪತ್ರಕರ್ತ ಚಂದ್ರಚೂಡ್ ಇಣುಕು ನೋಟ ಸಿಸಿಟಿವಿಯಲ್ಲಿ ಸೆರೆ
ನಟಿ ಶೃತಿ ನಿವಾಸಕ್ಕೆ ಬಂದ ಪತ್ರಕರ್ತ ಚಂದ್ರಚೂಡ್, ಕಿಟಕಿಯಲ್ಲಿ ಇಣುಕಿ ನೋಡುತ್ತಿರುವ ದೃಶ್ಯ...
ಬೆಂಗಳೂರು: ನಟಿ ಶ್ರುತಿ ನಿವಾಸಕ್ಕೆ ಬಂದ ಪತ್ರಕರ್ತ ಚಂದ್ರಚೂಡ್, ಕಿಟಕಿಯಲ್ಲಿ ಇಣುಕಿ ನೋಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪತ್ರಕರ್ತ ಚಂದ್ರಚೂಡ್ ಬಸವೇಶ್ವರನಗರದಲ್ಲಿರುವ ಶ್ರುತಿ ಮನೆಗೆ ತೆರಳಿ ಕಿಟಿಕಿಯಲ್ಲಿ ಇಣುಕಿ ನೋಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಶ್ರುತಿಯವರು ಆ ದೃಶ್ಯಾವಳಿಯನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ.
ನಿನ್ನೆ ಚಂದ್ರಚೂಡ್ ವಿರುದ್ಧ ಶೃತಿ ಅವರು ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದಾರೆ. ಕುಡಿದ ಅಮಲಿನಲ್ಲಿದ್ದ ಚಂದ್ರಚೂಡ ರಾತ್ರಿ 11.15ರ ಸಮಯದಲ್ಲಿ ಮನೆಗೆ ಬಂದು ಕಾಲಿಂಗ್ ಬೆಲ್ ಹೊತ್ತಿದ್ದಾರೆ, ಬಾಗಿಲು ತೆಗೆಯದೇ ಇದ್ದಾಗ, ಕಿಟಕಿಯಲ್ಲಿ ಇಣುಕಿ ನೋಡಿದ್ದಾರೆ ಎಂದು ಶ್ರುತಿ ಆರೋಪಿಸಿದ್ದಾರೆ.
ಕೊಲ್ಲೂರಿನಲ್ಲಿ ಶ್ರುತಿ ಅವರೊಡನೆ ಚಂದ್ರಚೂಡ್ ಮದುವೆ ಆಗಿದ್ದರು. ತದ ನಂತರ ಇಬ್ಬರ ಸಮ್ಮತಿ ಮೇರೆಗೆ ನ್ಯಾಯಾಲಯ ಮದುವೆಯನ್ನು ರದ್ದುಗೊಳಿಸಿತ್ತು. ಚಂದ್ರಚೂಡ್ ಅವರು ನಂಬಿಕೆ ದ್ರೋಹ ಮಾಡಿದ್ದಾರೆ. ಮದುವೆ ರದ್ದಾದರೂ ಚಂದ್ರಚೂಡ್ ಅವರು ನನ್ನ ಜೀವನದಲ್ಲಿ ತಲೆ ತೂರಿಸುತ್ತಿದ್ದಾರೆ ಎಂದು ಶ್ರುತಿ ಆಪಾದಿಸಿದ್ದಾರೆ.