ದಿನಕ್ಕೊಂದು ಬಾರಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ
ದಿನಕ್ಕೊಂದು ಬಾರಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಬೇಕು...
ಮಂಗಳೂರು: ದಿನಕ್ಕೊಂದು ಬಾರಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಬೇಕು. ನಿಲ್ದಾಣದ ಶುಚಿತ್ವ ಹಾಗೂ ಪ್ರಯಾಣಿಕರ ಸಮಸ್ಯೆಗೆ ಸ್ಪಂದಿಸಬೇಕು. ಸ್ವಂತ ಕಾಳಜಿಯಿಂದ ಕಾರ್ಯ ನಿರ್ವಹಿಸುವಂತೆ ಕೇಂದ್ರ ರೈಲ್ವೆ ಸಚಿವ ಡಿ.ವಿ ಸದಾನಂದ ಗೌಡ ಇಲಾಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರೈಲ್ವೆ ವಿಬಾಗೀಯ ಅಧಿಕಾರಿಗಳು ಹಾಗೂ ಜನರಲ್ ಮ್ಯಾನೇಜರ್ಗಳ ಕಾರ್ಯದಕ್ಷತೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇಲಾಖೆಯ ಎಲ್ಲ ವಿಭಾಗಗಳ ಅಧಿಕಾರಿಗಳ ಸಭೆ ಕರೆದು ತೆರೆದ ಮನಸ್ಸಿನಿಂದ ಕಾರ್ಯ ನಿರ್ವಹಿಸುವಂತೆ ನಿರ್ದೇಶಿಲಾಗಿದೆ. ಪ್ರತಿ ಅಧಿಕಾರಿಗಳು ದಿನಕ್ಕೊಂದು ನಿಲ್ಧಾಣಕ್ಕೆ ಕಡ್ಡಾಯ ಭೇಟಿ ನೀಡಿ, ಆಗುಹೋಗುಗಳ ಪರಿಶೀಲನೆ ನಡೆಸಬೇಕು. ನಾನೂ ಆಗಗ ನಿಲ್ದಾಣಗಳಿಗೆ ಭೇಟಿ ನೀಡುತ್ತೇನೆ. ಸಾಮಾನ್ಯರಿಗೆ ಸುಲಭ ಮತ್ತು ಸುರಕ್ಷತೆಯ ಪ್ರಯಾಣ ಅನುಭವ ಮೂಡಿಸಬೇಕಾದ್ದು ಮುಖ್ಯ ಎಂದರು.