ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ರಾಜಮನೆತನದಿಂದ ಖಾಸಗಿ ದರ್ಬಾರಿಲ್ಲ

ನಾಡಹಬ್ಬದ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ...

Mainashree
Updated On : 17 Aug 2014, 9:47 am

ಮೈಸೂರು: ನಾಡಹಬ್ಬದ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ರಾಜವಂಶಸ್ಥರ ಖಾಸಗಿ ದರ್ಬಾರ್, ವಿಜಯದಶಮಿ ಆಚರಣೆ ಈ ಬಾರಿ ನಡೆಯುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.

ಅವರು ಮೈಸೂರಿನ ಅಶೋಕಪುಂನ ಅರಣ್ಯ ಭವನ ಆವರಣದಲ್ಲಿ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿರುವ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿರುವ ದಸರಾ ಮಹೋತ್ಸವದಲ್ಲಿ ಭಾಗವಹೀಸಲು ಆಗಮಿಸಿರುವ ಅಂಬಾರಿ ಆನೆ ಅರ್ಜುನ ನೇತೃತ್ವದ ಗಜಪಡೆಗೆ ಶನಿವಾರ ಸಾಂಪ್ರದಾಯಿಕ ಸ್ವಾಗತ ಕೋರಿ ಈ ವಿಷಯ ತಿಳಿಸಿದರು. ರಾಜ್ಯ ಸರ್ಕಾರದ ವತಿಯಿಂದ ನಡೆಯುವ ಜನತಾ ದಸರಾ ಎಂದಿನಂತೆ ನಡೆಯಲಿದೆ.

ಅರಮನೆಯಲ್ಲಿ ಖಾಸಗಿ ದರ್ಬಾರ್ ಹಾಗೂ ವಿಜಯದಶಮಿ ಆಚರಣೆ ಇರುವುದಿಲ್ಲ. ಇದಕ್ಕೆ ಸರ್ಕಾರದ ವತಿಯಿಂದ ಸಹಕಾರ ನೀಡುವಂತೆ ಪ್ರಮೋದಾದೇವಿ ಒಡೆಯರ್ ಕೋರಿದ್ದಾರೆ. ಅವರ ಭಾವನೆಗೆ ಸರ್ಕಾರ ಮನ್ನಣೆ ನೀಡಿದೆ ಎಂದು ಸಚಿವರು ತಿಳಿಸಿದರು. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಪ್ರಮೋದಾ ದೇವಿ, ಅರಮನೆ ಆಸ್ತಿ ವಿವಾದ ಇತ್ಯರ್ಥವಾಗದೆ ಉತ್ತರಾಧಿಕಾರಿ ನೇಮಿಸುವುದು ಕಷ್ಟ. ಈ ಹಿನ್ನೆಲೆಯಲ್ಲಿ ಪ್ರಮೋದಾದೇವಿ ಇವರು ಖಾಸಗಿ ದರ್ಬಾರ್, ವಿಜಯದಶಮಿ ಆಚರಣೆ ನಡೆಸಲು ಆಗುವುದಿಲ್ಲವೆಂದಿದ್ದರು ಎಂದೂ ಅವರು ಈ ವೇಳೆ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement