ಜಿಲ್ಲಾ ಸುದ್ದಿ

ರಾಜ್ಯದಲ್ಲಿ 10 ಸಾವಿರ ಕೆರೆ ನಾಪತ್ತೆ!

ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 32,000 ಕೆರೆಗಳಿದ್ದು, ಇದರಲ್ಲಿ 10,000 ಕೆರೆಗಳು...

ಬೆಂಗಳೂರು: ರಾಜ್ಯದಲ್ಲಿ 10,000 ಕೆರೆಗಳೇ ನಾಪತ್ತೆ!
ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 32,000 ಕೆರೆಗಳಿದ್ದು, ಇದರಲ್ಲಿ 10,000 ಕೆರೆಗಳು ಕೇವಲ ದಾಖಲೆಗಳಲ್ಲಿವೆ. ಆದರೆ ಕೆರೆಗಳಿದ್ದ ಜಾಗದಲ್ಲಿ ಕೆರೆ ನಾಪತ್ತೆಯಾಗಿವೆ. ಹೀಗೆ ಅಚ್ಚರಿಯ ವಿಚಾರವನ್ನು ಪರಿಸರವಾದಿ ಯಲ್ಲಪ್ಪ ರೆಡ್ಡಿ ಶನಿವಾರ ಲೋಕ ಅದಾಲತ್‌ನಲ್ಲಿ ತೆರೆದಿಟ್ಟರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರೂ ಆದ ಹೈಕೋರ್ಟ್ ನ್ಯಾಯಮೂರ್ತಿ ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಅದಾಲತ್‌ನಲ್ಲಿ ಕೆರೆಗಳ ಒತ್ತುವರಿ, ತೆರೆದ ಬಾವಿಗಳ ಸಮಸ್ಯೆ ಸೇರಿದಂತೆ ಅನೇಕ ವಿಚಾರಗಳು ಪ್ರಸ್ತಾಪವಾದವು. ಈ ಮಧ್ಯೆ ಪ್ರಾಧಿಕಾರದ ಸದಸ್ಯ, ಪರಿಸರವಾದಿ ಯಲ್ಲಪ್ಪರೆಡ್ಡಿ ಮಾತನಾಡಿ, ರಾಜ್ದಲ್ಲಿ 32,000 ಕೆರೆಗಳಿವೆ ಎಂದು ಕಂದಾಯ ಇಲಾಖೆ ದಾಖಲೆಯಲ್ಲಿದೆ. ಆದರೆ, ವಾಸ್ತವದದಲ್ಲಿ ಕೇವಲ 22,000 ಕೆರೆಗಳಿವೆ ಎಂದರು. ಈಗ ಗಾಬರಿಯಾದ ನ್ಯಾ.ನಾರಾಯಣಸ್ವಾಮಿ, ಕೆರೆಗಳೇ ನಾಪತ್ತೆಯಾಗಿವೆ ಎಂದರೆ ಏನರ್ಥ. ಮೊದಲು ಒತ್ತುವರಿ ಮತ್ತು ಕಬಳಿಕೆಯಾಗಿರುವ ಕೆರೆಗಳನ್ನು ಪತ್ತೆ ಮಾಡಿ, ಮುಂದಿನ ಸಭೆಯಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಇದಕ್ಕೂ ಮುನ್ನ ಕೆರೆ ನೀರನ್ನು ಕಟ್ಟಡ ನಿರ್ಮಾಣಕ್ಕೆ ಬಳಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾ. ನಾರಾಯಣಸ್ವಾಮಿ, ಯಾವುದೇ ಕಾರಣಕ್ಕೂ ಕೆರೆಗಳ ನೀರನ್ನು ನಿರ್ಮಾಣ ಕಾಮಗಾರಿಗಳಿಗೆ ಬಳಶಬಾರದು. ಹಾಗೊಮ್ಮೆ ಕೆರೆ ನೀರನ್ನು ಬಳಸಿ ಕಾಮಗಾರಿಗಳನ್ನು ನಡೆಸುತ್ತಿರುವುದು ಕಂಡುಬಂದರೆ, ಅಂಥ ಕಟ್ಟಡಗಳನ್ನು ನೆಲಸಮಗೊಳಿಸಬೇಕು. ಅದರಲ್ಲೂ ಕೆರೆ ನೀರನ್ನು ಬಳಸಿ ಸರ್ಕಾರಿ ಕಟ್ಟಡಗಳನ್ನೂ ನಿರ್ಮಿಸಿರುವುದು ಬೆಳಕಿಗೆ ಬಂದಿದ್ದು, ಇದನ್ನು ತಡೆಯಬೇಕು. ಈ ಬಗ್ಗೆ ಕ್ರಮ ಕೈಗೊಂಡ ವರದಿಯನ್ನು ಮುಂದಿನ ಸಭೆಯಲ್ಲಿ ಸಲ್ಲಿಸಬೇಕೆಂದು ಆದೇಶಿಸಿದರು.

ಹೆಚ್ಚುತ್ತಿರುವ ತೆರೆದ ಬಾವಿ ದುರಂತಗಳ ಬಗ್ಗೆ ಅದಾಲತ್‌ನಲ್ಲಿ ಸುದೀರ್ಘ ಚರ್ಚೆ ನಡೆಯಿತು. ಸದಸ್ಯರ ಅಭಿಪ್ರಾಯ ಆಲಿಸಿದ ನ್ಯಾ.ನಾರಾಯಣಸ್ವಾಮಿ, ಇನ್ನುಮುಂದೆ ತೆರೆದ ಬಾವಿಗಳನ್ನು ಮುಚ್ಚುವ ಕೆಲಸ ತ್ವರಿತಗೊಳಿಸಬೇಕು. ಬಾವಿಗಳ ಮಾಹಿತಿ ಪಡೆಯಲು ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಬಳಸಿಕೊಳ್ಳಬೇಕು. ಇದರಿಂದ ದುರಂತ ತಪ್ಪಸಬಹುದು ಎಂದು ಹೇಳಿದರು.

ಇದಲ್ಲದೆ ರೇಷ್ಮೆ ನೇಯ್ಗೆ ನಂತರ ಉಳಿಯುವ ನೀರನ್ನು ಪುನರ್ ಬಳಕೆ ಮಾಡುವ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಅವರೂ ಸೂಚಿಸಿದರು. ಪ್ರಾದೇಶಿಕ ಆಯುಕ್ತ ಗೌರವ್ ಗುಪ್ತಾ, ಅನೇಕ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್