ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಸಿಎಂ, ಸಚಿವರ ಕಚೇರಿಯಲ್ಲಿ ಪ್ರಧಾನಿ ಭಾವಚಿತ್ರಕ್ಕಿಲ್ಲ ಸ್ಥಾನ!

Vishwanath S
Updated On : 17 Aug 2014, 10:01 am

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸೇರಿ ಸಂಪುಟದ ಹಲವು ಸಚಿವರಿಗೆ ಪ್ರಧಾನಿ ನರೇಂದ್ರ ಮೋದಿ ಮೇಲಿನ ಕೋಪ ಇನ್ನೂ ಇಳಿದಿಲ್ಲ...!

ಸಿದ್ದರಾಮಯ್ಯ ಮತ್ತು ಅವರ ಸಂಪುಟದ ಹಲವು ಸಚಿವರು ಪ್ರಧಾನಿ ಮೋದಿ ಭಾವ ಚಿತ್ರವನ್ನು ತಮ್ಮ ಕಚೇರಿಯಲ್ಲಿ ಹಾಕಿಕೊಳ್ಳದೇ ಸ್ವ ನಿರಾಕರಣೆ ಧೋರಣೆಯ ಪ್ರದರ್ಶನಕ್ಕೆ ಮುಂದಾಗಿರುವುದೇ ಇದಕ್ಕೆ ಸಾಕ್ಷಿ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ನನ್ನ ಹಾಗೆ ಒಂದು ರಾಜ್ಯದ ಮುಖ್ಯಮಂತ್ರಿ. ಅವರು ಹರಹರ ಮೋದಿಯಲ್ಲ, ನರಹರ ಮೋದಿ ಎಂದು ಟೀಕಿಸಿದ್ದ ಸಿದ್ದರಾಮಯ್ಯ ಅವರು, ಮೋದಿ ಯಾವುದೇ ಕಾರಣಕ್ಕೂ ಈ ದೇಶದ ಪ್ರಧಾನಿಯಾಗುವುದಿಲ್ಲ ಎಂದು ಪ್ರತಿಪಾದಿಸಿದ್ದರು. ಅವರ ಸಂಪುಟ ಸಹೋದ್ಯೋಗಿಗಳೂ ಇದೇ ಹಾದಿ ತುಳಿದಿದ್ದರು. ಆದರೆ ರಾಷ್ಟ್ರದ್ಯಂತ ಬೀಸಿದ ಮೋದಿ ಗಾಳಿ ಕಾಂಗ್ರೆಸಿಗರ ನಿರೀಕ್ಷೆಯ ಗೋಪುರ ಒಡೆದು ಹಾಕಿತ್ತು. ಮೋದಿ ಪ್ರಧಾನಿ ಗದ್ದುಗೆ ಏರಿ ಈಗ ನಾಲ್ಕು ತಿಂಗಳೇ ಕಳೆದುಹೋಗಿದೆ.

ಆದರೆ ಶಿಷ್ಟಾಚಾರದ ಪ್ರಕಾರ ಎಲ್ಲ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳ ಕಚೇರಿಯನ್ನು ಮೊದಲ್ಗೊಂಡು ಎಲ್ಲ ಸಚಿವರ ಕಚೇರಿಯಲ್ಲಿ ಪ್ರಧಾನಿ ಭಾವಚಿತ್ರವನ್ನು ಹಾಕಬೇಕು. ಇದಕ್ಕೆ ಆರಂಭದಿಂದಲೂ ರಾಜ್ಯ ಸರ್ಕಾರ ಇಲ್ಲದ ಸಬೂಬು ನೀಡುತ್ತಲೇ ಬಂದಿತ್ತು. ಪ್ರಧಾನಿ ಕಚೇರಿಯಿಂದಲೇ ಅಂಗೀಕೃತಗೊಂಡ ಭಾವಚಿತ್ರ ಬಂದ ನಂತರ ಹಾಕುತ್ತೇವೆ ಎಂದು ಮಾಧ್ಯಮದವರ ಪ್ರಶ್ನೆಗೆ ಸಾಗಹಾಕಿದ್ದರು.

ಆದರೆ ಕೇಂದ್ರದ ಜಾಹೀರಾತು ಮತ್ತು ದೃಶ್ಯ ಪ್ರಚಾರ ನಿರ್ದೇಶನಾಲಯ ಪ್ರಧಾನಿ ಭಾವಚಿತ್ರವನ್ನು ಅಂಗೀಕರಿಸಿ ಎಲ್ಲ ರಾಜ್ಯಗಳಿಗೆ ಕಳುಹಿಸಿಕೊಟ್ಟಿದೆ. ಆದರೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರ ಕಚೇರಿ ಹೊರತುಪಡಿಸಿದರೆ ಉಳಿದಡೆ ಪ್ರಧಾನಿ ಮೋದಿ ಅವರ ಭಾವಚಿತ್ರ ಕಾಣಿಸುತ್ತಿಲ್ಲ. ಇದಕ್ಕೆ ಕಾರಣ ಚುನಾವಣೆಗೆ ಮುನ್ನ ತಾವು ದ್ವೇಷಿಸಿದ ವ್ಯಕ್ತಿಯನ್ನೇ ಈಗ ಪ್ರಧಾನಿ ಎಂದು ಸ್ವೀಕರಿಸಿ ಕಣ್ಣೆದುರು ಇಟ್ಟುಕೊಳ್ಳಬೇಕೇಂಬ ಅಸಹನೆಯೋ ಅಥವಾ ಸಹಜ ಮರೆವೋ? ಮೋದಿಯವರ ಬಗೆಗಿನ ಸ್ವ ನಿರಾಕರಣೆಯ ಕಾಯಿಲೆಯೋ? ಶಿಷ್ಟಾಚಾರದ ಉಲ್ಲಂಘನೆಯೋ ಎಂಬುದು ಇನ್ನೂ ದೃಢಪಟ್ಟಿಲ್ಲ.

ವಿವಿಧ ಉತ್ತರ: ಸಿಎಂ ಹಾಗೂ ಸಂಪುಟ ಸಹೋದ್ಯೋಗಿಗಳು ಏಕೆ ಇನ್ನೂ ಪ್ರಧಾನಿ ಭಾವಚಿತ್ರ ಹಾಕಿಕೊಂಡಿಲ್ಲ ಎಂದು ನಾನಾ ಹಂತಗಳಲ್ಲಿ ಪ್ರಶ್ನಿಸಿದಾಗ, ಸಬೂಬುಗಳು ಮತ್ತು ಹಾರಿಕೆಯ ಉತ್ತರಗಳೇ ಬಂದಿವೆ. ಸಚಿವರ ಕಚೇರಿಯಿಂದ ಹಿಡಿದು ಶಿಷ್ಟಾಚಾರ ಶಾಖೆ, ಮುಖ್ಯಮಂತ್ರಿ ಕಾರ್ಯಾಲಯ ಸೇರಿದಂತೆ ಎಲ್ಲೆಡೆಯೂ ಇದೇ ರಾಗ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಾಲಯದ ಪ್ರಕಾರ, ಪ್ರಧಾನಿ, ರಾಷ್ಟ್ರಪತಿ, ರಾಷ್ಟ್ರಪತಿ ಹಾಗೂ ಮುಖ್ಯಮಂತ್ರಿ ಭಾವಚಿತ್ರವನ್ನು ಎಲ್ಲ ಸಚಿವರ ಕಚೇರಿಯಲ್ಲಿ ಶಿಷ್ಟಾಚಾರದ ಪ್ರಕಾರ ಹಾಕಬೇಕು.

-ರಾಘವೇಂದ್ರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement