ಜೆಡಿಎಸ್ ಕಾರ್ಯಕರ್ತರ ಕಿತ್ತಾಟ, ವೇದಿಕೆಯಿಂದ ಹೊರ ನಡೆದ ಮುಖಂಡರು
ಬೆಂಗಳೂರು: ಜೆಡಿಎಸ್ ಸಮಾವೇಶದಲ್ಲಿ ಮೈಕ್ಗಾಗಿ ಕಾರ್ಯಕರ್ತರು ಕಿತ್ತಾಟ ನಡೆಸಿದ್ದರಿಂದ ಪಕ್ಷದ ಪ್ರಮುಖ ಮುಖಂಡರು ಸಮಾವೇಶದಿಂದ ಹೊರ ನಡೆದಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜೆಡಿಎಸ್ ಸಮಾವೇಶದಲ್ಲಿ ಪಕ್ಷದ ಮುಖಂಡರು ಭಾಗವಹಿಸಿದ್ದರು. ಈ ವೇಳೆ ಸಮಾವೇಶವನ್ನುದ್ದೇಶಿಸಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಮಾತನಾಡಿದ ನಂತರ ವೇದಿಕೆ ಮುಂಭಾಗದಲ್ಲಿದ್ದ ಕಾರ್ಯಕರ್ತರು ಮೈಕ್ಗಾಗಿ ಕಿತ್ತಾಟ ನಡೆಸಿದರು. ಕಾರ್ಯಕರ್ತರ ಕಿತ್ತಾಟದಿಂದ ಬೇಸೆತ್ತ ಪಕ್ಷದ ಮುಖಂಡರಾದ ಹೆಚ್.ಡಿ. ರೇವಣ್ಣ, ಚಲುವರಾಯಸ್ವಾಮಿ, ಪುಟ್ಟಣ್ಣ ಹಾಗೂ ಎಂ.ಸಿ. ನಾಣಯ್ಯ ವೇದಿಕೆಯಿಂದ ಹೊರನಡೆದಿದ್ದಾರೆ
ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರು ಇತರ ಪಕ್ಷಗಳಿಗೆ ತೆರಳದಂತೆ ಅವರಿಗೆ ಅಭಯ ಅಸ್ತ ನೀಡುವ ಉದ್ದೇಶದಿಂದ ಇಂದು ಅರಮನೆ ಮೈದಾನದಲ್ಲಿ ಜೆಡಿಎಸ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪಕ್ಷದ ವರಿಷ್ಠ ದೇವೇಗೌಡ ಅವರು ಮಾತನಾಡಿದ ನಂತರ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ಕಾರ್ಯಕರ್ತರು ಮುಂದಾದರು ಈ ವೇಳೆ ಕಾರ್ಯಕರ್ತರಲ್ಲಿ ಮಾತಿನ ಚಕಮಿಕಿ ನಡೆದಿದೆ.