ಬೆಂಗಳೂರಿನಲ್ಲಿ 4 ಕುಖ್ಯಾತ ಮನೆಗಳ್ಳರ ಬಂಧನ
ನಗರದ ಕುಖ್ಯಾತ ನಾಲ್ವರು ಮನೆಗಳರನ್ನು ಸೋಮವಾರ ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ...
ಬೆಂಗಳೂರು: ನಗರದ ಕುಖ್ಯಾತ ನಾಲ್ವರು ಮನೆಗಳರನ್ನು ಸೋಮವಾರ ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.
ಮನೆಗಳ್ಳತನ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚೆತ್ತುಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ, ರಾಮ್ ಅಲಿಯಾಸ್ ಪಕ್ಕಾ, ಮಹಾರಾಜ್, ಗಣೇಶ್ ಮತ್ತು ಇಲಿಯಾಸ್ ಎಂಬ ನಾಲ್ವರು ಮನೆಗಳ್ಳರನ್ನು ಬಂಧಿಸಿದ್ದಾರೆ.
ಆರೋಪಿಗಳು ಚಿಂದಿ ಆಯುವ ನೆಪದಲ್ಲಿ ಮನೆಗಳ್ಳತನ ಮಾಡುತ್ತಿದ್ದರು. ಕೆಂಗೇರಿ ಸೇರಿ ಮೂರು ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. 20ಕ್ಕೂ ಹೆಚ್ಚು ಪ್ರಕರಣದಲ್ಲಿ ಆರೋಪಿಗಳು ಭಾಗಿಯಾಗಿದ್ದಾರೆ.
ಆರೋಪಿಗಳಿಂದ 150 ಗ್ರಾಂ ಚಿನ್ನಾಭರಣ, 2.5 ಕೆ.ಜಿ ಬೆಳ್ಳಿ ಮತ್ತು 5 ಲಕ್ಷ ನಗದು ವಶ ಪಡಿಸಿಕೊಂಡಿದ್ದಾರೆ.