ಬಳ್ಳಾರಿ ಸಂಪತ್ತಿನ ಮೇಲೆ ಡಿಕೆಶಿ ಕಣ್ಣು: ತೇಜಶ್ವಿನಿ
ಬಳ್ಳಾರಿ ಸಂಪತ್ತಿನ ಮೇಲೆ ಡಿ.ಕೆ ಶಿವಕುಮಾರ್ ಕಣ್ಣು ಬಿದ್ದಿದೆ ಎಂದು ಮಾಜಿ...
ಬಳ್ಳಾರಿ: ಬಳ್ಳಾರಿ ಸಂಪತ್ತಿನ ಮೇಲೆ ಡಿ.ಕೆ ಶಿವಕುಮಾರ್ ಕಣ್ಣು ಬಿದ್ದಿದೆ ಎಂದು ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಗೌಡ ಮಂಗಳವಾರ ಹೇಳಿದ್ದಾರೆ.
ಕನಕಪುರ ಕೊಳ್ಳೆ ಹೊಡೆದ ನಂತರ ಬಳ್ಳಾರಿಯ ಸಂಪತ್ತನ್ನು ಹೊಡೆಯುವ ಉದೇಶದಿಂದ ಹಾಗೂ ಸ್ವಾರ್ಥ ರಾಜಕಾರಣಕ್ಕೆ ಡಿಕೆಶಿ ಬಳ್ಳಾರಿಗೆ ಆಗಮಿಸಿದ್ದಾರೆ ಎಂದು ತೇಜಸ್ವಿನಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಕುರ್ಚಿಯ ಒಂದು ಕಾಲು ಡಿಕೆಶಿ ಕೈಯಲ್ಲಿದೆ. ಹಾಗಾಗಿ, ಸಿದ್ದರಾಮಯ್ಯ ಅವರಿಗೆ ಕುರ್ಚಿ ಕಳೆದುಕೊಳ್ಳುವ ಭಯವಿದೆ ಎಂದು ಅವರು ಹೇಳಿದ್ದಾರೆ.
ಸತ್ತ ವ್ಯಕ್ತಿ ಹೆಸರಿನಲ್ಲಿ ಡಿನೋಟಿಫಿಕೇಶನ್ ಮಾಡಿರುವ ಡಿಕೆಶಿ, ಕನಕಪುರದಲ್ಲಿ ಅವ್ಯಾಹತವಾಗಿ ಅಕ್ರಮ ಕಲ್ಲು ಗಣಿಗಾರಿಕೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.