ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಮತ್ತೆ ಬಿಜೆಪಿ ಸರ್ಕಾರ: ಯಡಿಯೂರಪ್ಪ ಸಂಕಲ್ಪ

ನಾನು ಜಾರಿಗೆ ತಂದ ಮೂರು ಲಕ್ಷ ಭಾಗ್ಯಲಕ್ಷ್ಮಿ ಯೋಜನೆಯನ್ನು ಕಡಿತ ಮಾಡುತ್ತಿದ್ದಾರೆ. ಗುಡಿಸಲು ರಹಿತ...

Mainashree
Updated On : 19 Aug 2014, 10:20 am

ಶಿರಾಳಕೊಪ್ಪ: ನಾನು ಜಾರಿಗೆ ತಂದ ಮೂರು ಲಕ್ಷ ಭಾಗ್ಯಲಕ್ಷ್ಮಿ ಯೋಜನೆಯನ್ನು ಕಡಿತ ಮಾಡುತ್ತಿದ್ದಾರೆ. ಗುಡಿಸಲು ರಹಿತ ರಾಜ್ಯವನ್ನು ಮಾಡಬೇಕೆಂಬ ಯೋಜನೆ ಕಾರ್ಯಗತಗೊಳ್ಳುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನ ಸುಣ್ಣದಕೊಪ್ಪ ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ 50 ಲಕ್ಷ ಬಿಪಿಎಸ್ ಕಾರ್ಡ್‌ಗಳನ್ನು ರದ್ದುಮಾಡಲು ಹೊರಟಿದ್ದಾರೆ. ನನಗೆ ಜಾತಿ ಗೊತ್ತಿಲ್ಲ, ಎಲ್ಲ ಜಾತಿಯವರೂ ಸ್ವಾಲಂಬಿಗಳಾಬೇಕು ಎಂಬ ಚಿಂತನೆ ನನ್ನದು. ರಸ್ತೆ, ನೀರು ದುಡಿಯುವ ಕೈಗೆ ಕೆಲಸ ಕೊಡಬೇಕು ಎಂಬ ಯೋಜನೆಯನ್ನು ನಾನು ಮುಖ್ಯಮಂತ್ರಿ ಆದಾಗ ಮಾಡಿದ್ದೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ತರುವ ಸಂಕಲ್ಪ ನನ್ನದು ಎಂದರು.

ರೈತರಿಗೆ ದಿನದ 24 ಗಂಟೆ ವಿದ್ಯುತ್ ಕೊಡುವ ಬಗ್ಗೆ ಯೋಜನೆ ಕೈಗೊಳ್ಳುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಚಿಂತನೆ ನಡೆಸಿದ್ದಾರೆ. ಅವರ ಬಾಯಿಂದ ಬಂದರೆ ಅದು ನೂರಕ್ಕೆ ನೂರು ಕಾರ್ಯಗತ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಮೋದಿ ಅವರು ರೈತರ ಬೆಳೆದ ವೈಜ್ಞಾನಿಕ ಬೆಲೆಕೊಡಿಸುವ ಹಾಗು ನಮಗೆ ಬೇಕಾಗುವ ಬೆಳೆಯನ್ನು ಮತ್ತು ವಸ್ತುಗಳನ್ನು ಇಲ್ಲಿಯೇ ಉತ್ಪಾದಿಸಬೇಕು ಎಂಬ ಇಚ್ಛೆ ಹೊಂದಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement