ಮಾಲಿನ್ಯ ಮಂಡಳಿಗೆ ಸೂಪರ್‌ಸೀಡ್ ಭೀತಿ
ಕೆಲಸ ಮಾಡದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಏಕೆ ಇಟ್ಟುಕೊಂಡಿದ್ದೀರಿ, ಈ...
ಬೆಂಗಳೂರು: ಕೆಲಸ ಮಾಡದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಏಕೆ ಇಟ್ಟುಕೊಂಡಿದ್ದೀರಿ, ಈ ಕೂಡಲೇ ಸೂಪರ್ ಸೀಡ್ ಮಾಡಲು ನೋಟಿಸ್ ಜಾರಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ಕಳೆದ 30 ವರ್ಷಗಳಿಂದಲೂ ಇದು ಕರ್ತವ್ಯ ನಿಭಾಯಿಸುವಲ್ಲಿ ವಿಫಲವಾಗಿದೆ. ಹೆಚ್ಚುತ್ತಿರುವ ಮಾಲಿನ್ಯ ಕ್ಯಾನ್ಸರ್‌ನಂಥ ಕಾಯಿಲೆಗಳಿಗೆ ಕಾರಣವಾಗಿದೆ. ಅಧಿಕಾರಿಗಳು ವರ್ಷಗಳಿಂದ ಇಲ್ಲೇ ಕಾರ್ಯ ಆಗಿ ಕುಳಿತಿದ್ದಾರೆ. ಆದರೂ ಇದನ್ನು ಸೂಪರ್‌ಸೀಡ್ ಮಾಡಿಲ್ಲವೇಕೆ ಎಂಬುದು ಹೈಕೋರ್ಟ್ ಪ್ರಶ್ನೆ.
ನಗರದಲ್ಲಿ ಹೆಚ್ಚಾಗುತ್ತಿರುವ ಶಬ್ದ ಮಾಲಿನ್ಯ ಪ್ರಮಾಣ ಗಮನಿಸಿದ್ದ ಹೈಕೋರ್ಟ್ ಸ್ವಯಂ ಪ್ರೇರಿತ ಅರ್ಜಿ ದಾಖಲಿಸಿಕೊಂಡಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಡಿ.ಎಚ್.ವಾಘೇಲಾ ಮತ್ತು ನ್ಯಾ.ಅಶೋಕ್ ಬಿ ಹಿಂಚಿಗೇರಿ ಅವರಿದ್ದ ಪೀಠ, ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ.
ನ್ಯಾಯಾಲಯ ಹೇಳಿದ್ದಿಷ್ಟು
ಕೈಗಾರಿಕಾ ಪ್ರದೇಶಗಳಿಗಿಂತ ಜನವಸತಿ ಪ್ರದೇಶಗಳಲ್ಲೇ ಶಬ್ಧ ಮಾಲಿನ್ಯ ಹೆಚ್ಚು
ಕ್ಯಾನ್ಸರ್‌ನಂಥ ಮಾರಕ ರೋಗಗಳಿಗೆ ತುತ್ತಾಗುತ್ತಿರುವ ಜನ
ರಸ್ತೆ ಅಪಘಾತದಲ್ಲಿ ಸಾಯುತ್ತಿರುವವರ ಸಂಖ್ಯೆಯೂ ಹೆಚ್ಚಳ
ಕೆಎಸ್‌ಆರ್‌ಟಿಸಿ, ಬಿಬಿಎಂಪಿ ಪ್ರತಿವಾದಿ
ಮಂಡಳಿ ಕರೆದ ಸಭೆಗೆ ಬರದೆ ಬಿಬಿಎಂಪಿ, ಕೆಎಸ್‌ಆರ್‌ಟಿಸಿ ಸಂಸ್ಥೆಯವರು ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಮಂಡಳಿ ನ್ಯಾಯಾಲಯದ ಗಮನಕ್ಕೆ ತಂದಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ವಿಭಾಗೀಯ ಪೀಠ, ಈ ಎರಡೂ ಸಂಸ್ಥೆಗಳನ್ನು ಪ್ರತಿವಾದಿ ಮಾಡಿ ಆದೇಶಿಸಿ ಮುಂದಿನ ವಿಚಾರಣೆಗೆ ಹಾಜರಾಗಲು ಸೂಚಿಸಿದೆ.
ಮಂಡಳಿಯ ಪ್ರಮಾಣ ಪತ್ರ
ಶಬ್ಧ ಮಾಲಿನ್ಯ ನಿಯಂತ್ರಣಕ್ಕಾಗಿ ವಾಹನ ಸವಾರರಿಗೆ 'ಶಬ್ಧ ರಹಿತ ದಿನ' ಎಂಬ ನೂತನ ಮಾರ್ಗಸೂಚಿ
ನಿಯಮ ಉಲ್ಲಂಘಿಸಿದವರ ವಿರುದ್ಧ ದಂಡ ವಸೂಲು
ರಾಜ್ಯ ಸರ್ಕಾರದಿಂದ ತಮ್ಮ ಪಾತ್ರ ಸೀಮಿತ, ಹೀಗಾಗಿ ಹೆಚ್ಚಿನ ಕ್ರಮ ಸಾಧ್ಯವಿಲ್ಲ ಎಂಬ ಅಸಹಾಯಕತೆ