ಬೆಂಗಳೂರಿನಲ್ಲಿ ಚಿನ್ನದ ಬಿಸ್ಕ್‌ಟ್ ಸಾಗಿಸುತ್ತಿದ್ದ ಆರೋಪಿಗಳ ಸೆರೆ
ಆಟೋದಲ್ಲಿ ಅಕ್ರಮವಾಗಿ ಚಿನ್ನದ ಬಿಸ್ಕಟ್ ಸಾಗಿಸುತ್ತಿದ್ದ...
ಬೆಂಗಳೂರು: ಆಟೋದಲ್ಲಿ ಅಕ್ರಮವಾಗಿ ಚಿನ್ನದ ಬಿಸ್ಕಟ್ ಸಾಗಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ನಗರದ ಆನಂದ್‌ರಾವ್ ಸರ್ಕಲ್‌ನಲ್ಲಿ ಆಟೋದಲ್ಲಿ ಅಕ್ರಮವಾಗಿ 3 ಕೆ.ಜಿ ಚಿನ್ನದ ಬಿಸ್ಕಟ್ ಸಾಗಿಸುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಗಳು ಕೊಯಂಬತ್ತೂರಿನ ನಟರಾಜ್, ಬಾಲ ಮತ್ತು ರಾಮ್ ಕುಮಾರ್ ಎಂದು ತಿಳಿದು ಬಂದಿದೆ. ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.