ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಮಾಳಗೊಂಡಕೊಪ್ಪ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

ಶಿಕಾರಿಪುರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯ ಮತದಾನ...

Mainashree
Updated On : 21 Aug 2014, 4:05 am

ಶಿಕಾರಿಪುರ: ರಾಜ್ಯದ 3 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆಯ ಮತದಾನ ಇಂದು ಬೆಳಗ್ಗಿನಿಂದಲೇ ಬಿರುಸಾಗಿ ಆರಂಭವಾಗಿದ್ದರೇ, ಮತ್ತೊಂದೆಡೆ, ಶಿಕಾರಿಪುರಕ್ಕೆ ಸೇರ್ಪಟ್ಟ ಗ್ರಾಮವೊಂದು ಮತದಾನ ಬಹಿಷ್ಕರಿಸಿದೆ.

ಶಿಕಾರಿಪುರ ತಾಲೂಕಿನ ಮಾಳಗೊಂಡಕೊಪ್ಪ ಗ್ರಾಮಸ್ಥರು ಮತದಾನವನ್ನು ಬಹಿಷ್ಕರಿಸಿದ್ದಾರೆ. ಗ್ರಾಮದಿಂದ 3 ಕಿ.ಮೀ ದೂರದಲ್ಲಿ ಮತಗಟ್ಟೆ ಸ್ಥಾಪನೆ ಮಾಡಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಈ ನಿರ್ಧಾರ ಕೈಗೊಂಡಿದ್ದಾರೆ.

ಚುನಾವಣಾ ಆಯೋಗ ಬಳ್ಳಿಗಾವಿಯಲ್ಲಿ ಮತಗಟ್ಟೆ ಸ್ಥಾಪಿಸಿದೆ. ಈ ಮತಗಟ್ಟೆ ಮಾಳಗೊಂಡಕೊಪ್ಪ ಗ್ರಾಮದಿಂದ ಮೂರು ಕಿ.ಮೀ ದೂರಲ್ಲಿದೆ. ಮಾಳಂಗೊಂಡಕೊಪ್ಪ ಗ್ರಾಮದಲ್ಲಿ 380 ಮತದಾರರಿದ್ದಾರೆ.

ಗ್ರಾಮದಲ್ಲಿ ಹಿರಿಯರು, ಅಂಗವಿಕಲರು ಮೂರು ಕಿ.ಮೀ ವ್ಯಾಪ್ತಿಗೆ ಚಲಿಸಿ ಮತದಾನ ಮಾಡಲು ಕಷ್ಟವಾಗುತ್ತದೆ. ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲ. ಇದೇ ಊರಲ್ಲಿ ಮತಗಟ್ಟೆ ಸ್ಥಾಪಿಸಬೇಕಿತ್ತು. ಆದರೆ, ಚುನಾವಣಾ ಆಯೋಗ ದೂರದಲ್ಲಿ ಮತಗಟ್ಟೆ ಸ್ಥಾಪಿಸಿದ್ದು, ಮತ ಚಲಾಯಿಸಲು ನಮಗೆ ಕಷ್ಟವಾಗುತ್ತದೆ. ಆದ್ದರಿಂದ ನಾವು ಮತದಾನ ಬಹಿಷ್ಕರಿಸಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement