ನಾಳೆ ಕನ್ನಡದ 'ನಟಿ ಶಕೀಲಾ ಆತ್ಮಕತೆ' ಬಿಡುಗಡೆ
ಬೆಂಗಳೂರು: ಕಥೆಗಾರ ಕೆ.ಕೆ. ಗಂಗಾಧರನ್ ಮಲಯಾಳಂ ಮೂಲದಲ್ಲಿರುವ ನಟಿ ಶಕೀಲಾ ಅವರ ಆತ್ಮಕತೆಯನ್ನು ಕನ್ನಡಕ್ಕೆ ಅನುವಾದಿಸಿರುವ ಹಾಗೂ ಸೀಮಾ ಬುಕ್ಸ್ ಹೊರತಂದಿರುವ 'ನಟಿ ಶಕೀಲಾ ಆತ್ಮಕತೆ' ಪುಸ್ತಕ ಶನಿವಾರ ಲೋಕಾರ್ಪಣೆಯಾಗುತ್ತಿದೆ.
ನಾಳೆ ಸಂಜೆ 6 ಗಂಟೆಗೆ ನಗರದ ಫ್ರೀಡಂ ಪಾರ್ಕ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಟಿ ಶಕೀಲಾ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಉದಯವಾಗಿ ಪುರವಣಿ ಸಂಪಾದಕ ಜೋಗಿ, ಲೇಖಕರು ಮತ್ತು ವಕೀಲರು ಆಗಿರುವ ಅಂಜಲಿ ರಾಮಣ್ಣ ಹಾಗೂ ಲೇಖಕ ಮತ್ತು ಅನುವಾದಕ ಕೆ.ಕೆ.ಗಂಗಾಧರನ್ ಅವರು ಅತಿಥಿಗಳಾಗಿ ಆಗಮಿಸುತ್ತಿದ್ದಾರೆ.