ಪ್ರಯಾಣಿಕರ ನೆರವಿಗೆ ಆಟೋಫೇರ್
ಆಟೋ ಏರಿದರೆ ಚಾಲಕರು ಮೀಟರ್ಗಿಂತ ಹೆಚ್ಚಿನ ದರ ವಸೂಲಿ...
-ಆಟೋ ಚಾಲಕರು ಹೆಚ್ಚಿನ ದರ ವಸೂಲಿ ಮಾಡಿದರೆ ಸಂಚಾರ ಪೊಲೀಸರಿಗೆ ದೂರು ನೀಡಬಹುದು
ಬೆಂಗಳೂರು: ಆಟೋ ಏರಿದರೆ ಚಾಲಕರು ಮೀಟರ್ಗಿಂತ ಹೆಚ್ಚಿನ ದರ ವಸೂಲಿ ಮಾಡುತ್ತಾರೆ ಎಂಬ ಚಿಂತೆ ಬೇಡ.
ಎಲ್ಲಿಂದ ಎಲ್ಲಿಗೆ ಹೋದರೆ ಎಷ್ಟು ದರ ಎಂಬ ಬಗ್ಗೆ ನೀವಿನ್ನು ಸುಲಭವಾಗಿ ಮಾಹಿತಿ ಪಡೆಯಬಹುದು. ಅಷ್ಟೇ ಅಲ್ಲ ಆಯೋ ಚಾಲಕ ಹೆಚ್ಚಿನ ದರ ವಸೂಲಿ ಮಾಡಿದರೆ ಸಂಚಾರ ಪೊಲೀಸರಿಗೆ ದೂರು ನೀಡಬಹುದು.
ಅದಕ್ಕಾಗಿ 'ಆಟೋಫೇರ್ ' ಎಂಬ ಹೊಸ 'ಆ್ಯಪ್'ನ್ನು ಟೆಕ್ಸ್ಟ್ ಕಂಪನಿ ತಯಾರಿಸಿದೆ. ನೀವು ಎಲ್ಲಿಂದ ಎಲ್ಲಿಗೆ ಹೋಗಬೇಕು ಎಂಬುದನ್ನು ಟೈಪ್ ಮಾಡಿ 51115ಗೆ ಸಂದೇಶ ಕಳುಹಿಸಿದರೆ ಅಲ್ಲಿಂದ ಅಲ್ಲಿಗೆ ಎಷ್ಟು ದರ ಎಂಬ ಬಗ್ಗೆ ನಿಮ್ಮ ಮೊಬೈಲ್ಗೆ ಸಂದೇಶ ಬರಲಿದೆ. ಆಗ ಆಟೋ ಚಾಲಕ ಹೆಚ್ಚಿನ ದರ ವಸೂಲಿ ಮಾಡಿದ್ದಲ್ಲಿ ಸಿಕ್ಕಿಬೀಳಲಿದ್ದಾನೆ.
ನಗರದ ಖಾಸಗಿ ಹೋಟೆಲೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಆಟೋಫೇರ್' ಎಂಬ ಹೊಸ ಆ್ಯಪ್ಗೆ ಸಂಚಾರ ಮತ್ತು ಭದ್ರತೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ನ್ಯಾಯಸಮ್ಮತವಲ್ಲದ ಆಟೋ ದರದ ಬಗೆಗಿನ ದೂರುಗಳ ಸಾಮಾನ್ಯವಾಗಿ ನಾಗರಿಕರಿಂದ ಕೇಳಿಬರುತ್ತಲೇ ಇರುತ್ತವೆ. ಈಗ ಈ ವಿಶಿಷ್ಟವಾದ ಎಸ್ಎಂಎಸ್ ಆಧರಿತ ಸೇವೆ ಮತ್ತು ಸ್ಪಷ್ಟ ಮಾಹಿತಿಯಿಂದಾಗಿ, ಈ ಆ್ಯಪ್ ದಿನನಿತ್ಯ ಸಂಚರಿಸುವ ಬಹಳಷ್ಟು ಪ್ರಯಾಣಿಕರಿಗೆ ಸುಲಭವಾಗಿ ಪ್ರಯಾಣಿಸಲು ಸಹಕಾರಿಯಾಗಲಿದೆ. ಇದು ಸ್ಮಾರ್ಟ್ ಫೋನ್ ಬಳಕೆದಾರರಿಗೆ ಮಾತ್ರ ಸೀಮಿತವಾಗಿಲ್ಲ ದಿರುವುದೂ ನಾಕರಿಕರಿಗೆ ಇನ್ನಷ್ಟು ನೆರವಾಗಿದೆ. ಸೂಕ್ತ ಆಟೋ ದರ ನಿಗದಿಗೆ ಸಂಬಂಧಿಸಿ ನಿಗಾ ಇಡಲು ಇದು ಟ್ರಾಫಿಕ್ ಪೊಲೀಸರಿಗೂ ಸಹಾಯಕವಾಗಲಿದೆ ಎಂದರು.
ಒಂದು ವೇಳೆ ಆಟೋ ಚಾಲಕನು ದರದ ಬಗ್ಗೆ ತಾರತಮ್ಯ ಮಾಡಿದರೆ, ಅದನ್ನು ತಿಳಿಯಲು ಮತ್ತು ಗುರುತಿಸಲು ನಗರದ ಎಲ್ಲ ಪ್ರಯಾಣಿಕರಿಗೆ ಈ ಸುಲಭ ಬಳಕೆಯ ಆ್ಯಪ್ ನೆರವಾಗಲಿದೆ.
ಈ ಆ್ಯಪ್, ಆಟೋದ ಸ್ಪಷ್ಟವಾದ ದರವನ್ನು ಸೂಚಿಸುವುದಲ್ಲದೇ, ಪ್ರಮುಖ ಲ್ಯಾಂಡ್ ಮಾರ್ಕ್ಗಳನ್ನು ತಿಳಿಸುವ ಮೂಲಕ ನೀವು ಸಂಚರಿಸುತ್ತಿರುವ ಮಾರ್ಗದ ವಿವರವನ್ನೂ ನೀಡುತ್ತದೆ. ಹಾಗಾಗಿ ಇದರಿಂದ ಅನುಕೂಲವಾಗಲಿದೆ ಎಂದರು.
ಟೆಕ್ಸ್ಟ್ ವೆಬ್ ಉದ್ದಿಮೆ ಮುಖ್ಯಸ್ಥರಾದ ಶ್ರೀವಿದ್ಯಾ ರಾಮರತ್ನಂ ಮಾತನಾಡಿ ದಿನದ 24 ಗಂಟೆಯೂ ಈ ಸೇವೆ ಲಭ್ಯ. ಜನರು ಇದನ್ನು ಸದುಪಯೋಗ ಪಡೆದುಕೊಳ್ಳಿ ಎಂದರು.