ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಸುವರ್ಣಸೌಧಕ್ಕೆ ಆನೆ ದಾಳಿ

ಕಾಡಿನಿಂದ ನಾಡಿಗೆ ಬಂದಿದ್ದ ಎರಡು ಗಂಡಾನೆಗಳನ್ನು ಸುರಕ್ಷಿತವಾಗಿ ಖಾನಾಪುರ ತಾಲೂಕಿನ...

Mainashree
Updated On : 22 Aug 2014, 9:42 am

ಬೆಳಗಾವಿ: ಕಾಡಿನಿಂದ ನಾಡಿಗೆ ಬಂದಿದ್ದ ಎರಡು ಗಂಡಾನೆಗಳನ್ನು ಸುರಕ್ಷಿತವಾಗಿ ಖಾನಾಪುರ ತಾಲೂಕಿನ ಗರ್ಲಗುಂಜಿ ಗ್ರಾಮಕ್ಕೆ ಕಳುಹಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಗುರುವಾರ ಬೆಳಗಿನ ಜಾವ 6 ಗಂಟೆಗೆ ಸುವರ್ಣ ವಿಧಾನಸೌಧದ ಬಳಿಯಿರುವ ಹಲಗಾ-ಬಸ್ತವಾಡ ಗ್ರಾಮದ ಸರಹದ್ದಿನಲ್ಲಿ ಸಂಚರಿಸುತ್ತಿದ್ದ ಆನೆಗಳನ್ನು ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ಸುನೀತಾ ನಿಂಬರಗಿ ನೇತೃತ್ವದ 25 ಸಿಬ್ಬಂದಿ ಬ್ಯಾಂಡ್ ಬಾರಿಸುತ್ತ ಧಾಮನೆ, ಯಳ್ಳೂರ, ಸುಳಗಾ ರಾಜಹಂಸಗಢ ಮಾರ್ಗವಾಗಿ ಖಾನಾಪುರ ತಾಲೂಕಿನ ಗರ್ಲಗುಂಜಿ ಹದ್ದಿನವರೆಗೆ ಓಡಿಲಸಲಾಯಿತು. ಸಂಜೆ ವೇಳೆಗೆ ಖಾನಾಪುರ ತಾಲೂಕಿನ ದಟ್ಟಾರಣ್ಯಕ್ಕೆ ಕಳುಹಿಸಲಾಯಿತು.

ಆನೆಗಳನ್ನು ವೀಕ್ಷಿಸುವುದಕ್ಕಾಗಿ ಭಾರಿ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರು. ಹಲಗಾ ಗ್ರಾಮದ ಬಳಿ ರೈತನೊಬ್ಬ, ಕಳೆದ 2 ವರ್ಷಗಳಿಂದ ಏಕೆ ನನ್ನನ್ನು ಹಾಳು ಮಾತುತ್ತಿದ್ದಿಯಾ? ಇಲ್ಲಿಂದ ಮೊದ್ಲು ತೊಲಗು ಎಂದು ಶಪಿಸುತ್ತ ನೂರು ಮೀಟರ್‌ನಷ್ಟು ಸಮೀಪ ಹೋಗುತ್ತಿದ್ದಂತೆಯೇ ಕೋಪೋದ್ರಿಕ್ತ ಆನೆಯು ಆತನನ್ನು ಬೆನ್ನಟ್ಟಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement