ಜಿಲ್ಲಾ ಸುದ್ದಿ

ಬಿಬಿಎಂಪಿ ರಾಂಗ್ ನಂಬರ್

'ಹಲೋ... ಕಾರ್ಪೋರೇಟರಾ?'ಬಿಬಿಎಂಪಿ ವೆಬ್‌ಸೈಟ್‌ನಲ್ಲಿರುವ ಕೆಲವು ಪಾಲಿಕೆ...

ಬೆಂಗಳೂರು: 'ಹಲೋ... ಕಾರ್ಪೋರೇಟರಾ?'
ಬಿಬಿಎಂಪಿ ವೆಬ್‌ಸೈಟ್‌ನಲ್ಲಿರುವ ಕೆಲವು ಪಾಲಿಕೆ ಸದಸ್ಯರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಈ ಪ್ರಶ್ನೆ ಕೇಳಿದರೆ, 'ಸಾರಿ, ರಾಂಗ್ ನಂಬರ್‌' ಎಂದು ಉತ್ತರ ಬರುತ್ತದೆ ಅತವಾ ರಿಂಗೇ ಆಗದೆ 'ಸ್ವಿಚ್ಡ್ ಆಫ್‌', 'ಈ ನಂಬರ್ ಅಸ್ತಿತ್ವದಲ್ಲಿಲ್ಲ' ಎಂಬ ಉತ್ತರ ಬರುತ್ತದೆ.

ಏಕೆಂದರೆ ಕೆಲವು ಪಾಲಿಕೆ ಸದಸ್ಯರು ಬಳಸುತ್ತಿರುವ ಮೊಬೈಲ್ ಸಂಖ್ಯೆಗೂ, ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಸಂಖ್ಯೆಗೂ ವ್ಯತ್ಯಾಸವಿದೆ. ಮಾಹಿತಿ ತಂತ್ರಜ್ಞಾನದ ರಾಜಧಾನಿ ಎಂದು ಬೀಗುತ್ತಿರುವ ಬೆಂಗಳೂರಿನಲ್ಲಿ ಆ ಕ್ಷೇತ್ರದಲ್ಲೇ ಬಿಬಿಎಂಪಿ ಸಾಕಷ್ಟು ಹಿಂದುಳಿದಿದೆ ಎನ್ನುವುದಕ್ಕೆ ವೆಬ್‌ಸೈಟ್ ಸಾಕ್ಷಿ. ವೆಬ್‌ಸೈಟ್‌ನಲ್ಲಿರುವ ಕೆಲವು ಪಾಲಿಕೆ ಸದಸ್ಯರ ಮೊಬೈಲ್ ಸಂಖ್ಯೆಗಳಲ್ಲಿ ತಪ್ಪಿದ್ದು, ಸದಸ್ಯರು ದೂರಿದ್ದರೂ ತಿದ್ದಲಾಗಿಲ್ಲ. ಅಭಿವೃದ್ಧಿ ಬಗ್ಗೆ ಕೌನ್ಸಿಲ್ ಸಭೆಗಳಲ್ಲಿ ಚರ್ಚೆಯಾಗುವಾಗ ತಂತ್ರಜ್ಞಾನ ಅಳವಡಿಸಿಕೊಳ್ಳುವ ಬಗ್ಗೆ ಹೆಮ್ಮೆಯಿಂದ ಉಲ್ಲೇಖಿಸುವ ಅಧಿಕಾರಿ ವರ್ಗ, ಕಾಲಕಾಲಕ್ಕೆ ವೆಬ್‌ಸೈಟ್‌ನಲ್ಲಾಗುವ ತಪ್ಪು ತಿದ್ದಿ ಅಪ್‌ಡೇಟ್ ಮಾಡಬೇಕೆಂಬುದನ್ನೇ ಅರಿತಿಲ್ಲ.

ಕೆಲವು ಪಾಲಿಕೆ ಸದಸ್ಯರ ಹೆಸರಿನಲ್ಲಿರುವ ಮೊಬೈಲ್ ಸಂಖ್ಯೆ ಸ್ವಿಚ್ಡ್ ಆಫ್, ನಾಟ್ ರೀಚೆಬಲ್ ಎಂದೇ ಪ್ರತಿ ಬಾರಿ ಹೇಳುತ್ತಿರುತ್ತದೆ. ಸ್ಥಳೀಯವಾಗಿ ಸಮಸ್ಯೆಯೊಂದು ಉದ್ಭವಿಸಿದಾಗ ಪಾಲಿಕೆ ಸದಸ್ಯರನ್ನು ಸಂಪರ್ಕಿಸಲು ವೆಬ್‌ಸೈಟ್ ಬಳಕೆಯಾಗುತ್ತದೆ. ಆದರೆ ಸಂಖ್ಯೆ ತಪ್ಪಿರುವುದರಿಂದ ತುತುಂ ಅಗತ್ಯಗಳಿಗೆ ಪಾಲಿಕೆ ಸದಸ್ಯರು ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ. ಕೆಲವು ಸದಸ್ಯರ ಸಂಖ್ಯೆಗಳಲ್ಲಿ ತಪ್ಪಿದ್ದರೆ, ಮತ್ತೆ ಕೆಲವು ಮೊಬೈಲ್ ಸಂಖ್ಯೆಗಳಲ್ಲಿ 20ರ ಬದಲು 9 ಸಂಖ್ಯೆ ಮಾತ್ರವಿದೆ. ಕೆಲವು ಸಂಖ್ಯೆಗಳಿಗೆ ಕರೆ ಮಾಡಿದರೆ ಸದಾ 'ಅಸ್ತಿತ್ವದಲ್ಲಿಲ್ಲ' ಎಂದರೆ, ಮತ್ತೆ ಕೆಲವು ಸಂಬಂಧವಿಲ್ಲದವರನ್ನು ತಲುಪುತ್ತದೆ.

ನಿಯಂತ್ರಣ ಕೊಠಡಿಯಲ್ಲಿದೆ: ಬಿಬಿಎಂಪಿ ನಿಯಂತ್ರಣ ಕೊಠಡಿ (22221188)ಗೆ ಕರೆ ಮಾಡಿದರೆ ಸದಸ್ಯರ ಸರಿಯಾದ ಮೊಬೈಲ್ ಸಂಖ್ಯೆ ದೊರೆಯುತ್ತದೆ. ನಿಯಂತ್ರಣ ಕೊಠಡಿಯಲ್ಲಿರುವ ಮಾಹಿತಿ ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲ. ಕೇಂದ್ರ ಕಚೇರಿಯಲ್ಲಿ ಐಟಿ ವಿಭಾಗವಿದ್ದರೆ, ವೆಬ್‌ಸೈಟ್ ನಿರ್ವಹಿಸುವ ಕಚೇರಿ ಮಲ್ಲೇಶ್ವರದಲ್ಲಿದೆ.

ಪಾಲಿಕೆ ಸದಸ್ಯರ ಮೊಬೈಲ್ ಸಂಖ್ಯೆಗಳನ್ನು ಕೌನ್ಸಿಲ್ ಕಾರ್ಯದರ್ಶಿ ವೈಬ್‌ಸೈಟ್‌ಗೆ ನೀಡುತ್ತಾರೆ. ಆದರೆ, ಪ್ರಥಮ ಬಾರಿಗೆ ನೀಡಿದ ಮಾಹಿತಿಯಲ್ಲಿ ಸಾಕಷ್ಟು ತಪ್ಪುಗಳಿದ್ದರೂ ಅದನ್ನು ಸರಿಪಡಿಸಿ ಮತ್ತೊಮ್ಮೆ ಮಾಹಿತಿ ಒದಗಿಸುವಲ್ಲಿ ಕೌನ್ಸಿಲ್ ಕಾರ್ಯದರ್ಶಿ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಯಾರೇ ದೂರು ನೀಡಿದ್ದರೂ ಕಾರ್ಪೋರೇಟರ್‌ಗಳ ಮಾಹಿತಿ ವೆಬ್‌ಸೈಟ್‌ನಲ್ಲಿ ಬದಲಾಗಿಲ್ಲ.

ಕರೆಯಿಂದ ಕಿರಿಕಿರಿ: 110ನೇ ವಾರ್ಡ್ ಸದಸ್ಯ ಗೋಪಿ ಅವರ ಸಂಖ್ಯೆಗೆ ಕರೆ ಮಾಡಿದರೆ 112ನೇ ವಾರ್ಡ್ ಸದಸ್ಯೆ ಗೀತಾ ಶ್ರೀನಿವಾಸರೆಡ್ಡಿ ಕರೆ ಸ್ವೀಕರಿಸಬೇಕಾಗುತ್ತದೆ. ಏಕೆಂದರೆ ವೆಬ್‌ಸೈಟ್‌ನಲ್ಲಿ ಗೋಪಿ ಹೆಸರಿನಲ್ಲಿರುವ ಸಂಖ್ಯೆ ಗೀತಾ ಅವರಿಗೆ ಸೇರಿದೆ. ವಿಚಿತ್ರವೆಂದರೆ ಗೀತಾ ಹೆಸರಿನಲ್ಲೂ ಇದೇ ಸಂಖ್ಯೆಯಿದೆ. ಹೀಗಾಗಿ ಗೋಪಿ ಅವರಿಗೆ ಸಾರ್ವಜನಿಕರಿಂದ ಬರುವ ಕರೆಗಳನ್ನೆಲ್ಲ ಗೀತಾ ಅವರು ಸ್ವೀಕರಿಸಬೇಕಾಗಿದೆ.

ಸಾರ್ವಜನಿಕರಿಂದ ಸಾಕಷ್ಟು ಬಾರಿ ಕರೆ ಬರುತ್ತದೆ. ಪ್ರತಿ ಬಾರಿ ಈ ಸಂಖ್ಯೆ ನನ್ನದಲ್ಲ ಎಂದು ಹೇಳಿ ಗೋಪಿ ಅವರ ಮೊಬೈಲ್ ಸಂಖ್ಯೆ ನೀಡುತ್ತೇನೆ. ನನ್ನನ್ನು ಸಂಪರ್ಕಿಸಲು ಯತ್ನಿಸುವ ಜನರಿಗೆ ವೆಬ್‌ಸೈಟ್‌ನಿಂದ ಮೊಬೈಲ್ ಸಂಖ್ಯೆ ದೊರೆಯುವುದಿಲ್ಲ. ವೆಬ್‌ಸೈಟ್‌ನಲ್ಲಾದ ತಪ್ಪು ಸರಿ ಮಾಡಿ ಎಂದು ಸಾಕಷ್ಟು ಬಾರಿ ಮನವಿ ಮಾಡಿದ್ದೇನೆ. ಎಂದು ಗೀತಾ ಶ್ರೀನಿವಾಸರೆಡ್ಡಿ ಗೋಳು ತೋಡಿಕೊಳ್ಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!