ಕಾವೇರಿಯಲ್ಲಿ ಅನಂತಮೂರ್ತಿ ಚಿತಾಭಸ್ಮ ವಿಸರ್ಜನೆ
ಜ್ಞಾನಪೀಠ ಪ್ರಶಸ್ತಿ ಪುರಸ್ಕತ ಡಾ.ಯು.ಆರ್.ಅನಂತಮೂರ್ತಿ ಅವರ ಚಿತಾಭಸ್ಮವನ್ನು ಸೋಮವಾರ ದಕ್ಷಿಣ ಕಾಶಿ ಎಂದೇ ಹೆಸರಾದ...
ಮಂಡ್ಯ: ಜ್ಞಾನಪೀಠ ಪ್ರಶಸ್ತಿ ಪುರಸ್ಕತ ಡಾ.ಯು.ಆರ್.ಅನಂತಮೂರ್ತಿ ಅವರ ಚಿತಾಭಸ್ಮವನ್ನು ಸೋಮವಾರ ದಕ್ಷಿಣ ಕಾಶಿ ಎಂದೇ ಹೆಸರಾದ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿ ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.
ಅನಂತಮೂರ್ತಿ ಅವರ ಪುತ್ರ ಶರತ್ ತಂದೆಯ ಚಿತಾಭಸ್ಮವನ್ನು ಧಾರ್ಮಿಕ ವಿಧಿವಿಧಾನಗಳ ಅನ್ವಯ ವಿಸರ್ಜಿಸಿದರು. ಬೆಂಗಳೂರಿನಿಂದ ಬೆಳಿಗ್ಗೆ 11 ಗಂಟೆಗೆ ಚಿತಾಭಸ್ಮವನ್ನು ಪಶ್ಚಿಮ ವಾಹಿನಿಗೆ ತರವಾಯಿತು. ಬೆಂಗಳೂರಿನಿಂದಲೇ ಆಗಮಿಸಿದ್ದ ಅರ್ಚಕ ಸುಬ್ರಹ್ಮಣ್ಯ ಅವರ ನೇತೃತ್ವದಲ್ಲಿ 45 ನಿಮಿಷ ಪೂಜೆ ನಡೆಯಿತು. ಮಡಕೆಯಲ್ಲಿದ್ದ ಚಿತಾಭಸ್ಮಕ್ಕೆ ಹಾಲು, ತುಪ್ಪ, ಜೇನುತುಪ್ಪ ಸುರಿದು ಪೂಜೆ ಸಲ್ಲಿಸಲಾಯಿತು. ತರುವಾಯ ನದಿಗೆ ಇಳಿದ ಶರತ್, ಚಿತಾಭಸ್ಮವನ್ನು ಶಾಸ್ತ್ರೋಕ್ತವಾಗಿ ವಿಸರ್ಜಿಸಿದರು.
ಈ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಶರತ್ ನಿರಾಕರಿಸಿದರು.