ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಸಿಇಟಿ ಮೂಲಕ 1298 ಉಪನ್ಯಾಸಕರ ನೇಮಕ

Lingaraj Badiger
Updated On : 26 Aug 2014, 11:11 am

ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳಿಗೆ 1298 ಉಪನಾಸ್ಯಕರನ್ನು ಸಿಇಟಿ ಮೂಲಕ ನೇಮಕ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದ್ದು, ಸೆ.15ರಿಂದ ಪ್ರಕ್ರಿಯೆ ಆರಂಭವಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರು ತಿಳಿಸಿದ್ದಾರೆ.

ಸ್ಪರ್ಧಾತಕ್ಮ ಹಾಗೂ ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆ ನಡೆಸಬೇಕೆಂಬ ಉದ್ದೇಶದಿಂದ ಸಿಇಟಿ ಮೂಲಕ ನೇಮಕ ಮಾಡುತ್ತಿದ್ದೇವೆ. ಕೆಪಿಎಸ್‌ಸಿ ಬಗ್ಗೆ ಇತ್ತೀಚಿನ ದಿನಗಳಲ್ಲಿ ಕೆಲವು ಸಂದೇಹಗಳಿವೆ. ಸಿಇಟಿಯಲ್ಲಿ ವೈವಾ ಇರುವುದಿಲ್ಲ. ಒಟ್ಟು 411 ಪದವಿ ಕಾಲೇಜುಗಳಲ್ಲಿ 7505 ಅನುಮೋದಿತ ಹುದ್ದೆಗಳಿದ್ದು, 1685 ಖಾಲಿ ಇವೆ. ಇವುಗಳಲ್ಲಿ 1298 ಹುದ್ದೆ ಭರ್ತಿ ಮಾಡಿಕೊಳ್ಳಲು ಹಣಕಾಸು ಸೇರಿದಂತೆ ಎಲ್ಲ ಇಲಾಖೆಗಳ ಅನುಮೋದನೆ ದೊರೆತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

ಉಪನ್ಯಾಸಕರ ಹಾಜರಿ, ಪಾಠಕ್ಕೆ ಇಎಂಐಎಸ್‌ನ ಬಯೊವುಟ್ರಿಕ್ ಮಾಹಿತಿಯನ್ನು 310 ಕಾಲೇಜುಗಳಲ್ಲಿ ಅಳವಡಿಸಲಾಗಿದೆ. ಗುಲ್ಬರ್ಗಾ ವಲಯದಲ್ಲಿ ಟೆಲಿ ಎಜ್ಯುಕೇಷನ್ ವ್ಯವಸ್ಥೆಯ ಮೊದಲ ಹಂತ ಶೀಘ್ರವೇ ಪ್ರಾರಂಭವಾಗಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement