ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಜೆಡಿಎಸ್ ಸದೃಢವಾಗಿದೆ: ದೇವೇಗೌಡ

ರಾಜ್ಯದಲ್ಲಿ ಜೆಡಿಎಸ್ ಮುಗಿದು ಹೋಗಿದೆ ಎನ್ನುವವರು ಕಾದು ನೋಡಿ, ಪಕ್ಷ ಸದೃಢ...

Mainashree
Updated On : 27 Aug 2014, 10:54 am

ಹಾಸನ: ರಾಜ್ಯದಲ್ಲಿ ಜೆಡಿಎಸ್ ಮುಗಿದು ಹೋಗಿದೆ ಎನ್ನುವವರು ಕಾದು ನೋಡಿ, ಈ ಪಕ್ಷ ಸದೃಢವಾಗಿದೆ. ರಾಜಕೀಯದಲ್ಲಿ ನಾನೆಂದರೂ ನಿರಾಶವಾದಿಯಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಹೇಳಿದ್ದಾರೆ.

ನಗರದಲ್ಲಿ ಸೋಮವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾವ ಸಮುದಾಯಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಅನ್ನೋ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ಮಾಡುತ್ತೇನೆ. ಪಕ್ಷದಿಂದ ಹೊರ ಹೋಗುವ ಯಾವ ಮುಖಂಡರ ಬಗ್ಗೆಯೂ ಟೀಕೆ ಮಾಡುವುದಿಲ್ಲ ಎಂದರು.

ನನ್ನ ಮಕ್ಕಳು ಮಾತ್ರ ಓಡಾಡ್ತಾರಾ?
ಮುಂದಿನ ವರ್ಷಾಂತ್ಯದ ವೇಳೆ ಹಾಸನ-ಬೆಂಗಳೂರು ನೇರ ರೈಲು ಮಾರ್ಗ ಮುಗಿಯಲಿದೆ. ಹಾಸನ-ದುದ್ದ ರಸ್ತೆ ಕಾಮಗಾರಿ ಅನಗತ್ಯ ವಿಳಂಬವಾಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು, ಈ ರಸ್ತೆಯಲ್ಲಿ ರೇವಣ್ಣ ಅವರು ಮಕ್ಕಳು ಮಾತ್ರವೇ ಓಡಾಡುತ್ತಾರಾ ಎಂದು ಪ್ರಶ್ನಿಸಿದರು.

ಅಭಿವೃದ್ಧಿಯಲ್ಲಿ ರಾಜಕೀಯ ಬೆರೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ಗೌಡರು, ರು.1300 ಕೋಟಿ ವೆಚ್ಚದ ವಿಮಾನ ನಿಲ್ಧಾಣ ಕಾಮಗಾರಿಯೂ ನೆನೆಗುದಿಗೆ ಬಿದ್ದಿದೆ. ಆದ್ಯತೆ ಪಟ್ಟಿಯಲ್ಲಿ ಹಾಸನ ವಿಮಾನ ನಿಲ್ದಾಣ ಇಲ್ಲ. ಹೀಗಾದರೆ ಏನು ಮಾಡಲಿ ಎಂದರು.
ಪಕ್ಷ ಪುನಾರಚನೆ
ನನ್ನ ಹೋರಾಟ ನಿರಂತರ. ಜೆಡಿಎಸ್ ಪಕ್ಷ ಹುಟ್ಟಿರುವುದೇ ಬಡವರ ಪರ ಹೋರಾಡಲು. ಜೆಡಿಎಸ್ ಬಗ್ಗೆ ಯಾರು ಏನೇ ಟೀಕೆ ಮಾಡಿದರೂ ನಾನು ಏನನ್ನೂ ಮಾತನಾಡುವುದಿಲ್ಲ. ಇಲ್ಲಿಂದಲೇ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಪುನಾರಚನೆ ಮಾಡುವೆ ಎಂದರು. ಅಧಿಕಾರಾವಧಿಯ ಉಳಿದ ದಿನಗಳನ್ನು ಜಿಲ್ಲೆಯಲ್ಲೇ ಕಳೆಯುವೆ. ಜನಸಂಪರ್ಕ ಸಭೆಗೆ ಆದ್ಯತೆ ನೀಡಿ, ಜನರ ದುಃಖ ದುಮ್ಮಾನ ಆಲಿಸುವುದಾಗಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement