ರಾಜ್ಯ ಬಿಜೆಪಿ ನಾಯಕರ ವಿರುದ್ಧ ಬಿಎಸ್‌ವೈ ಗರಂ
ಉಪಚುನಾವಣೆ ರಾಜ್ಯ ಬಿಜೆಪಿ ನಾಯಕರು ಸರಿಯಾಗಿ ಪ್ರಚಾರ ಮಾಡಲಿಲ್ಲ ಎಂದು ಸಂಸದ...
ಬೆಂಗಳೂರು: ಉಪಚುನಾವಣೆ ರಾಜ್ಯ ಬಿಜೆಪಿ ನಾಯಕರು ಸರಿಯಾಗಿ ಪ್ರಚಾರ ಮಾಡಲಿಲ್ಲ ಎಂದು ಸಂಸದ ಬಿ.ಎಸ್ ಯಡಿಯೂರಪ್ಪ ಬುಧವಾರ ಗುಡುಗಿದ್ದಾರೆ.
ವಿಧಾನಸಭೆ ಉಪ ಚುನಾವಣೆಯ ಸೋಲಿನ ಕುರಿತು ಇಂದು ಬಿಜೆಪಿ ಕಚೇರಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಗರಂ ಆಗಿರುವ ಯಡಿಯೂರಪ್ಪ, ಚುನಾವಣೆಗಾಗಿ ಬಿಜೆಪಿ ನಾಯಕರು ಸರಿಯಾಗಿ ಪ್ರಚಾರ ಮಾಡಲಿಲ್ಲ. ಸರಿಯಾಗಿ ಪ್ರಚಾರ ಮಾಡಿದ್ದರೆ, 2 ಕ್ಷೇತ್ರಗಳಲ್ಲಿ ಸೋಲುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ಯಾವ ಸಂಸದರೂ ಪ್ರಚಾರಕ್ಕೆ ಬರಲಿಲ್ಲ. ಬಂದು ಪ್ರಚಾರ ಮಾಡಿದ್ದರೆ, ಶಿಕಾರಿಪುರದಲ್ಲಿ ಕಡಿಮೆ ಮತಗಳಲ್ಲಿ ಗೆಲ್ಲಬೇಕಾಗಿರಲಿಲ್ಲ ಎಂದ ಅವರು ಕಾಂಗ್ರೆಸ್ ತಂತ್ರಗಾರಿಕೆ ಚೆನ್ನಾಗಿತ್ತು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಕೇವಲ ಒಂದು ಗೆಲುವು ಕಂಡ ಬಿಜೆಪಿ, ಬಿಜೆಪಿ ಭದ್ರಕೋಟೆ ಎಂದೇ ಬಿಂಬಿಸಲಾಗಿದ್ದು ಬಳ್ಳಾರಿ ಮತ್ತು ಚಿಕ್ಕೋಡಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುಂದೆ ಸೋಲು ಕಂಡಿತ್ತು. ಇದರಿಂದ ಬಿಜೆಪಿ ಭದ್ರಕೋಟೆ ಮುರಿದ ಕಾಂಗ್ರೆಸ್ ಎಂಬ ಹೆಸರು ಬಂದಿತು.
ದೇಶಾದ್ಯಂತ ಮೋದಿ ಅಲೆ ಎಂದು ಹೇಳಾಲಾಗುತ್ತಿದ್ದರೂ, ಉಪಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿರುವುದರ ಕುರಿತು ಚರ್ಚಿಸಿ ಆತ್ಮಾವಲೋಕನ ಮಾಡಿಕೊಳ್ಳಲು ಬಿಜೆಪಿ ನಿರ್ಧರಿಸಿರುವ ಬಿಜೆಪಿ ಮುಖಂಡರು ಸಭೆ ಸೇರಿದ್ದಾರೆ.