ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಕಾರ್ತಿಕ್ ಗೌಡ ವಿರುದ್ಧ ಮೈತ್ರಿಯಾ ದೂರು

ಕೇಂದ್ರ ಸಚಿವ ಡಿ.ವಿ ಸದಾನಂದಾಗೌಡ ಪುತ್ರ ಕಾರ್ತಿಕ್ ಗೌಡ ವಿರುದ್ಧ ನಟಿ ಮೈತ್ತಿಯಾ ದೂರು ದಾಖಲಿಸಿದ್ದಾರೆ...

Mainashree
Updated On : 1 Sept 2014, 10:58 am

ಬೆಂಗಳೂರು: ಕೇಂದ್ರ ಸಚಿವ ಡಿ.ವಿ ಸದಾನಂದಾಗೌಡ ಪುತ್ರ ಕಾರ್ತಿಕ್ ಗೌಡ ವಿರುದ್ಧ ನಟಿ ಮೈತ್ತಿಯಾ ದೂರು ದಾಖಲಿಸಿದ್ದಾರೆ.

ಕಾರ್ತಿಕ್ ಗೌಡ ವಿರುದ್ಧ ಅತ್ಯಾಚಾರ, ಅಪಹರಣ ಹಾಗೂ ವಂಚನೆ ಆರೋಪದಡಿ ಆರ್‌ಟಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಐಪಿಸಿ ಸೆಕ್ಷನ್ 420 ಮತ್ತು 376ರ ಅಡಿಯಲ್ಲಿ ಕಾರ್ತಿಕ್ ವಿರುದ್ಧ ಕೇಸ್ ದಾಖಲಾಗಿದೆ.

ಬುಧವಾರ ಸಂಜೆ ಸಹೋದರಿ ಸುಪ್ರಿಯಾ ಹಾಗೂ ವಕೀಲರೊಂದಿಗೆ ಠಾಣೆಗೆ ಆಗಮಿಸಿದ ಮೈತ್ರಿಯಾ, ಒಂದು ವರ್ಷಕ್ಕೂ ಹೆಚ್ಚು ದಿನಗಳಿಂದ ಪರಿಚಯವಿದ್ದ ಕಾರ್ತಿಕ್, ಮದುವೆಯಾಗುವುದಾಗಿ ದೈಹಿಕ ಸಂಬಂಧ ಬೆಳೆಸಿದ್ದ, ಮಂಗಳೂರಿನಲ್ಲಿರುವ ಸದಾನಂದಗೌಡರ ಮನೆಯಲ್ಲಿ ಜೂ.5 ಮದುವೆಯಾಗಿದ್ದ ಎಂದು ದೂರಿನಲ್ಲಿ ಮೈತ್ರಿಯಾ ವಿವರಿಸಿದ್ದಾರೆ.

ಇಂದು ಅಂಬೇಡ್ಕರ್ ಕಾಲೇಜಿನಲ್ಲಿ ಮೈತ್ರಿಯಾ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣ ಸಂಬಂಧಿಸಿದಂತೆ ಪ್ರತಿಕ್ರಯಿಸಿರುವ ಡಿ.ವಿ ಸದಾನಂದಗೌಡರು, ನನ್ನ ಕುಟುಂಬದ ವಿರುದ್ಧ ಷಡ್ಯಂತರ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. 

ನನ್ನ ಮಗ ಕಾರ್ತಿಕ್ ವಿರುದ್ಧ ವಿನಾಕಾರಣಾ ಆರೋಪ ಮಾಡಲಾಗಿದೆ. ಕೇಸ್‌ನಲ್ಲಿ ನನ್ನ ಮಗನ ತಪ್ಪಿದ್ದರೇ ಕಾನೂನು ಕ್ರಮ ಕೈಗೊಳ್ಳಲಿ ಎಂದು ಅವರು ತಿಳಿಸಿದ್ದಾರೆ.

ಅಲ್ಲದೇ, ಕಾರ್ತಿಕ್‌ಗೌಡ ವಂಚನೆ ಪ್ರಕರಣ ಕುರಿತು ವರದಿ ನೀಡುವಂತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಸದಾನಂದಗೌಡ ಅವರಿಗೆ ಸೂಚಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement