ಕಾರ್ತಿಕ್ ವಿರುದ್ಧ 'ರೇಪ್' ಆರೋಪ ಮಾಡಿದ್ದ ಮೈತ್ರಿಯಾಗೆ ನೋಟಿಸ್
ಬೆಂಗಳೂರು: ಕೇಂದ್ರ ರೇಲ್ವೆ ಸಚಿವ ಸದಾನಂದ ಗೌಡ ಅವರ ಪುತ್ರ ಕಾರ್ತಿಕ್ಗೌಡ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿರುವ ನಟಿ ಮೈತ್ರಿಯಾಗೌಡ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಆರ್.ಟಿ. ನಗರ ಪೊಲೀಸರು ನೋಟಿಸ್ ನೀಡಿದ್ದಾರೆ.
ದೂರು ನೀಡಿದ ನಂತರ ಮೈತ್ರಿಯಾ ಗೌಡ ಅವರು ವಿಚಾರಣೆಗೆ ಹಾಜರಾಗುತ್ತಿಲ್ಲ ಎಂದಿರುವ ಪೊಲೀಸರು ಮೈತ್ರಿಯಾ ಗೌಡರಿಗೆ ನೋಟಿಸ್ ನೀಡಿದ್ದು, ತನಿಖೆಗೆ ಸಹಕರಿಸುವಂತೆ ಸೂಚಿಸಿದ್ದಾರೆ.
ಅತ್ಯಾಚಾರ ಎಲ್ಲಿ ನಡೆದಿತ್ತು? ಯಾವಾಗ ನಡೆದಿತ್ತು? ಈ ಬಗ್ಗೆ ಪ್ರಕರಣದ ಬಗ್ಗೆ ವಿಚಾರಣೆ ಹಾಜರಾಗದ ಹಿನ್ನೆಲೆಯಲ್ಲಿ ಇದೀಗ ಆರ್.ಟಿ. ನಗರ ಪೊಲೀಸರೇ ಮೈತ್ರಿಯಾ ಮನೆಗೆ ತೆರಳಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಸದಾನಂದಗೌಡ ಪುತ್ರ ಕಾರ್ತಿಕ್ ವಿರುದ್ಧ ವಂಚನೆ, ಅಪಹರಣ ಹಾಗೂ ಅತ್ಯಾಚಾರ ಆರೋಪ ಮಾಡಿರುವ ನಟಿ ಮೈತ್ರಿಯಾಗೌಡ, ಈ ಸಂಬಂಧ ಬೆಂಗಳೂರಿನ ಆರ್.ಟಿ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.