ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ದಸರಾ ವಸ್ತು ಪ್ರದರ್ಶನ ಗುತ್ತಿಗೆದಾರನಿಗೆ ಮುಂಬೈನಿಂದ ಬೆದರಿಕೆ ಕರೆ

ದಸರಾ ವಸ್ತು ಪ್ರದರ್ಶನ ಸಬ್‌ಟೆಂಡರ್ ಪಡೆದಿರುವ ಗುತ್ತಿಗೆದಾರ ಮಂಜು ಅವರಿಗೆ ಮುಂಬೈನಿಂದ ಬೆದರಿಕೆ ಕರೆ ಬಂದಿದೆ...

Mainashree
Updated On : 1 Sept 2014, 9:20 am

ಮೈಸೂರು: ದಸರಾ ವಸ್ತು ಪ್ರದರ್ಶನ ಸಬ್‌ಟೆಂಡರ್ ಪಡೆದಿರುವ ಗುತ್ತಿಗೆದಾರ ಮಂಜು ಅವರಿಗೆ ಮುಂಬೈನಿಂದ ಬೆದರಿಕೆ ಕರೆ ಬಂದಿದೆ ಎಂದು ಮೂಲಗಳು  ತಿಳಿಸಿವೆ.

ಮುಂಬೈನಿಂದ ಕರೆಮಾಡಿದ ಕಿಡಿಗೇಡಿಗಳು ಗುತ್ತಿಗೆದಾರ ಮಂಜು ಅವರಿಗೆ ದಸರಾ ವಸ್ತು ಪ್ರದರ್ಶನ ಸಬ್‌ಟೆಂಡರ್ ವಾಪಸ್ ಪಡೆಯಿರಿ ಎಂದು ಬೆದರಿಕೆ ಹಾಕಿದ್ದಾರೆ. ಟೆಂಡರ್ ವಾಪಸ್ ಪಡೆಯದಿದ್ದರೇ, ಮನೆಗೆ ಬಂದು ಶೂಟ್ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ ಎಂದು ಮಂಜು ತಿಳಿಸಿದ್ದಾರೆ.

2.15 ಕೋಟಿ ರು. ವೆಚ್ಚದ ಟೆಂಡರ್ ವಾಪಸ್ ಪಡೆಯಿರಿ ಎಂದು ಬೆದರಿಕೆ ಹಾಕಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಮಂಜು ಅವರೇ ದಸರಾ ವಸ್ತು ಪ್ರದರ್ಶನ ಸಬ್‌ಟೆಂಡರ್ ಪಡೆಯುತ್ತಿದ್ದರು. ಬಹುಶಃ ಟೆಂಡರ್ ನಮಗೆ ಬರುತ್ತಿಲ್ಲ ಎಂಬ ಹಿನ್ನಲೆಯಲ್ಲಿ ಬೇರೆ ಗುತ್ತಿಗೆದಾರರು ಈ ರೀತಿ ಬೆದರಿಕೆ ಕರೆ ಮಾಡಿಸಿದ್ದಾರೆ ಎಂದು ಶಂಕಿಸಲಾಗಿದೆ.

ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement