ಜಿಲ್ಲಾ ಸುದ್ದಿ

ದಸರಾಕ್ಕೆ ಪಾಸ್‌ಪೋರ್ಟ್

ಈ ಬಾರಿಯ ದಸರಾಕ್ಕೆ ಮೈಸೂರಿಗೆ ಹೋಗುವವರು ಸುತ್ತಮುತ್ತಲ ಪ್ರವಾಸಿ...

-ಪ್ರವಾಸಿ ತಾಣಗಳಿಗೆ ಸುಲಭ ಪ್ರವೇಶ| ಪ್ರವಾಸಿಗರ ಅನುಕೂಲಕ್ಕೆ ಮೈಸೂರು ಜಿಲ್ಲಾಡಳಿತದ ವಿಶಿಷ್ಟ ಯೋಜನೆ

ಕ.ಪ್ರ.ವಾರ್ತೆ| ಮೈಸೂರು |ಆ.31:
ಈ ಬಾರಿಯ ದಸರಾಕ್ಕೆ ಮೈಸೂರಿಗೆ ಹೋಗುವವರು ಸುತ್ತಮುತ್ತಲ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಯೋಜನೆಯನ್ನೂ ಹಾಕಿಕೊಳ್ಳಬಹುದು. ಏಕೆಂದರೆ ಒಮ್ಮೆ 'ಪಾಸ್‌ಪೋರ್ಟ್‌' ಖರೀದಿಸಿಬಿಟ್ಟರೆ ಎಲ್ಲೆಡೆ ಅಡಚಣೆ ರಹಿತ ಪ್ರವೇಶ. ಎಲ್ಲಿಯೂ ಟಿಕೆಟ್‌ಗಾಗಿ ಕ್ಯೂ ನಿಲ್ಲುವ ಪ್ರಮೇಯವಿಲ್ಲ.

ಪ್ರಮುಖ ಸ್ಥಳಗಳಾದ ಅಂಬಾವಿಲಾಸ ಅರಮನೆ, ಮೃಗಾಲಯ, ಕಾರಂಜಿಕೆರೆ ಉದ್ಯಾನ, ಚಾಮುಂಡಿಬೆಟ್ಟ, ಕೆಆರ್‌ಎಸ್ ಅಣೆಕಟ್ಟೆ ಹಾಗೂ ರಂಗನತಿಟ್ಟು ಪಕ್ಷಿಧಾಮವನ್ನು ಮೈಸೂರು ಟೂರಿಸ್ಟ್ ಪಾಸ್‌ಪೋರ್ಟ್ ಒಳಗೊಂಡಿದೆ. ಪಾಸ್‌ಪೋರ್ಟ್ ಪಡೆದವರು ಯಾವುದೇ ಸಮಸ್ಯೆ ಇಲ್ಲದೆ ಈ ಸ್ಥಳಗಳಿಗೆ ಭೇಟಿ ನೀಡಬಹುದು.

ದಸರಾಕ್ಕೆ ಮತ್ತಷ್ಟು ಕಳೆ ಕಟ್ಟುವ ಸಲುವಾಗಿ ನೂತನವಾಗಿ ಜಾರಿಗೆ ತಂದಿರುವ ಮೈಸೂರು 'ಪ್ರವಾಸೋದ್ಯಮ ಪಾಸ್‌ಪೋರ್ಟ್‌' ಅನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಭಾನುವಾರ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ದೇಶ-ವಿದೇಶಗಳಿಂದ ದಸರಾಗೆ ಬರುವು ಪ್ರವಾಸಿಗರು ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪಾಸ್‌ಪೋರ್ಟ್ ಯೋಜನೆಯನ್ನು ಸೆ.15ರಿಂದ ಜಾರಿಗೆ ತರಲಾಗುತ್ತದೆ. ಒಂದು ತಿಂಗಳ ಕಾಲ ಚಾಲ್ತಿಯಲ್ಲಿರುತ್ತದೆ ಎಂದರು.

ಪಾಸ್‌ಪೋರ್ಟ್ ಮಾಹಿತಿ

  • ಪ್ರವಾಸೋದ್ಯಮ ಪಾಸ್‌ಪೋರ್ಟ್ ಸೆ.15ರಿಂದ ಅ.15ರವರೆಗೆ ಚಾಲ್ತಿಯಲ್ಲಿರುತ್ತದೆ
  • ಕಿತ್ತಳೆ ಮಾದರಿ ಪಾಸ್‌ಪೋರ್ಟ್ ಒಂದು ದಿನಕ್ಕೆ ಸೀಮಿತವಾಗಿದ್ದು, ವಯಸ್ಕರಿಗೆ ರು.80, ಮಕ್ಕಳಿಗೆ ರು.40, ವಿದೇಶಿಗರಿಗೆ ರು.220, ವಿದೇಶಿ ಮಕ್ಕಳಿಗೆ ರು.110 ದರ ನಿಗದಿಪಡಿಸಲಾಗಿದೆ. ಇದರಲ್ಲಿ ಮೈಸೂರು ಅರಮನೆ ಹಾಗೂ ಮೃಗಾಲಯ ವೀಕ್ಷಿಸಬಹುದು.
  • ಹಸಿರು ಮಾದರಿ ಪಾಸ್‌ಪೋರ್ಟ್ ಎರಡು ದಿನಗಳಿಗೆ ಸೀಮಿತವಾಗಿದ್ದು, ವಯಸ್ಕರಿಗೆ ರು.120, ಮಕ್ಕಳಿಗೆ ರು.75, ವಿದೇಶಿ ಪ್ರವಾಸಿಗರಿಗೆ ರು.260 ಮತ್ತು ವಿದೇಶಿ ಮಕ್ಕಳಿಗೆ ರು.160 ನಿಗದಿಪಡಿಸಲಾಗಿದೆ. ಅರಮನೆ, ಮೃಗಾಲಯ, ಕಾರಂಜಿಕೆರೆ ಉದ್ಯಾನ ಹಾಗೂ ಚಾಮುಂಡಿ ಬೆಟ್ಟ ವೀಕ್ಷಿಸಬಹುದು.
  • ನೀಲಿ ಮಾದರಿ ಪಾಸ್‌ಪೋರ್ಟ್ ಮೂರು ದಿನಗಳಿಗೆ ಸೀಮಿತ. ವಯಸ್ಕರಿಗೆ ರು.160, ಮಕ್ಕಳಿಗೆ ರು.100, ವಿದೇಶಿಗರಿಗೆ ರು.510, ವಿದೇಶಿ ಮಕ್ಕಳಿಗೆ ರು.170 ನಿಗದಿಪಡಿಸಲಾಗಿದೆ. ಇದರಲ್ಲಿ ಮೈಸೂರು ಅರಮನೆ, ಮೃಗಾಲಯ, ಕಾರಂಜಿಕೆರೆ ಉದ್ಯಾನ, ಚಾಮುಂಡಿ ಬೆಟ್ಟ, ಕೆಆರ್‌ಎಸ್ ಅಣೆಕಟ್ಟೆ ಹಾಗೂ ರಂಗನತಿಟ್ಟು ಪಕ್ಷಿಧಾಮಗಳಿಗೆ ಭೇಟಿ ನೀಡಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ಅ.16ರ CJPಯ ಪ್ರತಿಭಟನೆಗೆ ತಡೆ ನೀಡಲು ಹೈಕೋರ್ಟ್ ನಕಾರ!

ಕಾಕ್ರೋಚ್ ಜನತಾ ಪಾರ್ಟಿ, ಕಾಂಗ್ರೆಸ್ ಎರಡೂ ಒಂದೇ; ಇಲ್ಲಿ ನಿಮ್ಮನ್ನು ಯಾರೂ ಬಂಧಿಸಲ್ಲ: ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ!

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; ಎರಡು ದಿನಗಳ ಡೆಡ್‌ಲೈನ್‌!

Indian Stock Market: ಕೊನೆಗೂ ಪುಟಿದಿದ್ದ ಭಾರತೀಯ ಷೇರು ಮಾರುಕಟ್ಟೆ, ಸೆನ್ಸೆಕ್ಸ್ ದಾಖಲೆಯ ಏರಿಕೆ