ಮಲ್ಯ 'ಉದ್ದೇಶಪೂರ್ವಕ ಸುಸ್ತಿದಾರ'-ಯುಬಿಐ
ಕಿಂಗ್ಫಿಷರ್ ಏರ್ಲೈನ್ಸ್ ಸಂಸ್ಥೆಯ ಮುಖ್ಯಸ್ಥ ವಿಜಯ್ಮಲ್ಯ 'ಉದ್ದೇಶಪೂರ್ವಕ ಸುಸ್ತಿದಾರ' ಎಂದು...
ಬೆಂಗಳೂರು: ಕಿಂಗ್ಫಿಷರ್ ಏರ್ಲೈನ್ಸ್ ಸಂಸ್ಥೆಯ ಮುಖ್ಯಸ್ಥ ವಿಜಯ್ಮಲ್ಯ 'ಉದ್ದೇಶಪೂರ್ವಕ ಸುಸ್ತಿದಾರ' ಎಂದು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಘೋಷಿಸಿದೆ.
ಮಲ್ಯ ಬೇಕಂತಲೇ ಬ್ಯಾಂಕ್ ಸಾಲವನ್ನು ಹಿಂತಿರುಗಿಸಿಲ್ಲ. ಹಾಗಾಗಿ, ಮಲ್ಯ 'ಉದ್ದೇಶಪೂರ್ವಕ ಸುಸ್ತಿದಾರ' ಎಂದು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಘೋಷಿಸಿದೆ ಎಂದು ಯುಬಿಐ ಬ್ಯಾಂಕ್ ಉನ್ನತ ಮೂಲಗಳಿಂದ ಮಾಹಿತಿ ಬಂದಿದೆ.
ಮದ್ಯದ ದೊರೆ ವಿಜಯ್ಮಲ್ಯ ಅವರು ಒಟ್ಟು 17 ಸಾರ್ವಜನಿಕ ಬ್ಯಾಂಕುಗಳಿಗೆ 12,000 ಕೋಟಿ ರು. ಸಾಲ ಉಳಿಸಿಕೊಂಡಿದ್ದಾರೆ. ಆದರೆ ಉದ್ದೇಶ ಪೂರ್ವಕವಾಗಿ ಮಲ್ಯ ಸಾಲ ಹಿಂತಿರುಗಿಸುತ್ತಿಲ್ಲ ಎಂದು ಯುಬಿಐ ಹೇಳಿದೆ.