ಸಿಇಟಿ ಏ.29ರಿಂದ
ಮುಂದಿನ ಶೈಕ್ಷಣಿಕ ಸಾಲಿನ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಸಂಬಂಧಿಸಿ ಸಾಮಾನ್ಯ ಪ್ರವೇಶ...
ಬೆಂಗಳೂರು: ಮುಂದಿನ ಶೈಕ್ಷಣಿಕ ಸಾಲಿನ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಸಂಬಂಧಿಸಿ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯ ವೇಳಾಪಟ್ಟಿ ಪ್ರಕಟವಾಗಿದೆ.
ವೈದ್ಯ, ದಂತವೈದ್ಯ, ಎಂಜಿನಿಯರಿಂಗ್, ಆರ್ಯುರ್ವೇದ, ಹೋಮಿಯೋಪತಿ, ಯುನಾನಿ, ನ್ಯಾಚುರೋಪತಿ-ಯೋಗ, ಕೃಷಿ ವಿಜ್ಞಾನ, ರೇಷ್ಮೆ, ಅರಣ್ಯ ಶಾಸ್ತ್ರ, ತೋಟಗಾರಿಕೆ, ಬಿ ಫಾರ್ಮಾ, ಡಿ ಫಾರ್ಮಾ ಕೋರ್ಸ್ಗಳಿಗೆ ಪ್ರವೇಶ ಪರೀಕ್ಷೆಯು ಏಪ್ರಿಲ್ 29, 30 ಹಾಗೂ ಮೇ 1ರಂದು ನಡೆಯಲಿದೆ. ಈ ಬಾರಿ ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ ಪ್ರವೇಶ ಹಾಗೂ ಶುಲ್ಕ ನಿಯಂತ್ರಣ ಕಾಯಿದೆ ಜಾರಿ ಮಾಡುವುದಾಗಿ ಸರ್ಕಾರ ಹೇಳಿರುವುದರಿಂದ ಸಿಇಟಿಗೆ ಹೆಚ್ಚಿನ ಮಹತ್ವ ಬರುವ ಸಾಧ್ಯತೆಯಿದೆ.
ಏತನ್ಮಧ್ಯೆ, 2006ರ ಕಾಯಿದೆಯಂತೆ ಪ್ರವೇಶ ಪ್ರಕ್ರಿಯೆ ನಡೆಸುವುದಾಗಿ ಕಾಮೆಡ್-ಕೆ ಘೋಷಣೆ ಮಾಡಿದ್ದು, ಮೇ 10ರಂದು ಪ್ರವೇಶ ಪರೀಕ್ಷೆ ನಡೆಸುವುದಾಗಿ ತಿಳಿಸಿದೆ. ಆದರೆ ವೇಳಾಪಟ್ಟಿಯನ್ನು ಇನ್ನೂ ಪ್ರಕಟಿಸಿಲ್ಲ. ಇದೇ ಕಾಯಿದೆ ಪ್ರಕಾರ ಫೇ.1ರಂದು ಸ್ನಾತಕೋತ್ತರ ಕೋರ್ಸ್ಗಳ ಪ್ರವೇಶ ಪರೀಕ್ಷೆ ನಡೆಸಲು ಕಾಮೆಡ್-ಕೆ ನಿರ್ಧರಿಸಿದೆ.