ತುಮಕೂರು: ಮಧುಗಿರಿ ತಾಲೂಕಿನಲ್ಲಿ ಇಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
ಮಧುಗಿರಿ ಹೊರವಲಯದ ಜ್ಯುಪಿಟರ್ ಶಾಲೆಯಲ್ಲಿ ಈ ನಾಲ್ವರು ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ವ್ಯಾಸಾಂಗ ಮಾಡುತ್ತಿದ್ದರು. ಇಂದು ಮಧ್ಯಾಹ್ನ ಈ ನಾಲ್ವರು ವಿದ್ಯಾರ್ಥಿಗಳು ಒಂದೇ ಬೈಕ್‌ನಲ್ಲಿ ಸವಾರಿ ಹೊರಟಿದ್ದರು. ಹೊಸಹಳ್ಳಿಯಿಂದ ಮಧುಗಿರಿಯತ್ತ ವಿದ್ಯಾರ್ಥಿಗಳು ಬೈಕ್‌ನಲ್ಲೇ ಪ್ರಯಾಣ ಬೆಳೆಸಿದ್ದರು.
ಈ ಸಂದರ್ಭ ಮಧುಗಿರಿಯ ಜಡೇಗೊಂಡನಹಳ್ಳಿ ಬಳಿ ಖಾಸಗಿ ಬಸ್‌ವೊಂದು ಸಂಚರಿಸುತ್ತಿತ್ತು. ಈ ವೇಳೆ ಬೈಕ್ ತನ್ನ ಸಮತೋಲನ ಕಳೆದುಕೊಂಡು ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಬಸ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ನಲ್ಲಿದ್ದ ನಾಲ್ವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತ 16 ವರ್ಷದ ವಿದ್ಯಾರ್ಥಿಗಳನ್ನು ಅವಿನಾಶ್, ಯದು, ಅಭಿ ಮತ್ತು ಶಶಿ ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಮಧುಗಿರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.