ತನಿಖೆಗೆ ಬೇಸತ್ತು ದಯಾಮರಣಕ್ಕೆ 104 ಪಿಡಿಓಗಳ ಅರ್ಜಿ
ಗದಗ: ಲೋಕಾಯುಕ್ತ ಪೊಲೀಸರ ತನಿಖೆಯಿಂದ ಬೇಸತ್ತು 104 ಮಂದಿ ಪಂಚಾಯಿತ್ ಅಭಿವೃದ್ಧಿ ಅಧಿಕಾರಿ(ಪಿಡಿಓ)ಗಳು ದಯಾಮರಣ ಕೋರಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದಾರೆ.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವು ಯೋಜನೆಗಳಡಿಯಲ್ಲಿ ನಡೆದಿರುವ ಎಲ್ಲಾ ಕಾಮಗಾರಿಗಳೂ ಕೂಡ ಕಳಪೆಯಾಗಿದ್ದು, ಈ ಎಲ್ಲಾ ಜವಾಬ್ದಾರಿಯನ್ನು ಕೂಡ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೇ ಹೊರಬೇಕಿದೆ ಎಂಬ ಕಾರಣದಿಂದಾಗಿ ಈ ಎಲ್ಲಾ ಸಿಬ್ಬಂದಿಗಳು ದಯಾಮರಣದ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಇನ್ನು ಮುಖ್ಯವಾಗಿ ಎನ್‌ಆಇರ್ಜಿ ಯೋಜನೆಯಡಿ ಮಾಡಲಾಗಿರುವ ಎಲ್ಲಾ ಕಾಮಗಾರಿಗಳೂ ಕೂಡ ತೀರ ಕಳಪೆಯಾಗಿದ್ದು, ಲೋಕಾಯುಕ್ತ ಪೊಲೀಸರು ಪಿಡಿಓಗಳ ಬೆನ್ನತ್ತಿದ್ದಾರೆ. ಇದರಿಂದ ಬೇಸತ್ತಿರುವ ಪಿಡಿಓಗಳು ಯಾರೋ ಮಾಡಿದ ತಪ್ಪಿಗೆ ನಾವು ತಲೆಬಾಗಬೇಕಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದು, ಇದೇ ಕಾರಣಕ್ಕೆ ದಯಾಮರಣಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದಿದ್ದಾರೆ.