ಮಿಸ್ ಸುಪ್ರಾ ಇಂಟರ್ ನ್ಯಾಷನಲ್ ಆಶಾ ಭಟ್(ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

'ಮಿಸ್ ಸುಪ್ರಾ' ಸುಂದರಿಗೆ ಭದ್ರಾವತಿಯಲ್ಲಿ ಭವ್ಯ ಸ್ವಾಗತ

ಕರ್ನಾಟಕ ಭದ್ರಾವತಿ ಮೂಲದವರಾದ...

ಭದ್ರಾವತಿ: ಕರ್ನಾಟಕ ಭದ್ರಾವತಿ ಮೂಲದವರಾದ ಆಶಾ ಭಟ್ ಮಿಸ್ ಸುಪ್ರಾ ಇಂಟರ್ ನ್ಯಾಷನಲ್ ಸೌಂದರ್ಯ ಕಿರೀಟ ಮುಡಿಗೇರಿಸಿಕೊಂಡಿದ್ದು, ಇಂದು ತವರಿಗೆ ಮರಳಿದ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ.

ಭಾನುವಾರ ಭದ್ರಾವತಿಯ ಮಾಧವ ನಗರದಲ್ಲಿ ಆಶಾ ಭಟ್ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಮಾತನಾಡಿದ ಆಶಾ, ಇಂದು ನಿಜವಾದ ನಜರ ಪ್ರೀತಿ ಗಳಿಸಿದ್ದೇನೆ. ನನಗೆ ತುಂಬಾ ಸಂತೋಷವಾಗಿದೆ. ದೇಶಕ್ಕಾಗಿ ಇನ್ನು ಏನಾದರೂ ಸಾಧನೆ ಮಾಡುವ ಕನಸಿದೆ ಎಂದರು.

ತೆರೆದ ವಾಹನದಲ್ಲಿ ಆಶಾ ಜತೆ ತಂದೆ ಸುಬ್ರಹ್ಮಣ್ಯ ಭಟ್ ಮತ್ತು ತಾಯಿ ಶ್ಯಾಮಲಾ ಇದ್ದರು. ಶಾಸಕ ಎಂಜೆ ಅಪ್ಪಾಜಿ ಆಶಾ ಭಟ್ ಅವರನ್ನು ಬರಮಾಡಿಕೊಂಡರು. ಸಾವಿರಾರು ಜನರು ಮೆರವಣಿಗೆಯಲ್ಲಿ ಭಾಗವಹಿಸಿ ಡೊಳ್ಳು ಮತ್ತು ವಾದ್ಯಗಳಿಗೆ ಕುಣಿದು ಸಂಭ್ರಮಿಸಿದರು.

ಪೊಲೆಂಡಿನಲ್ಲಿ ನಡೆದ ಸುಪ್ರಾ ನ್ಯಾಷನಲ್ ಸೌಂದರ್ಯ ಸ್ಪರ್ಧೆಯಲ್ಲಿ ಆಶಾ ಭಟ್ ಮಿಸ್ ಸುಪ್ರಾ ನ್ಯಾಷನಲ್ ಕಿರೀಟ ಧರಿಸಿದ್ದು, ದಕ್ಷಿಣ ಆಫ್ರಿಕಾ ಮೂಲದ ಸಂಸ್ಥೆ ನಡೆಸಿದ ಈ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾದ ಮೊದಲ ಭಾರತೀಯರೆಂಬ ಕೀರ್ತಿಗೂ ಆಶಾ ಭಟ್ ಭಾಜನರಾಗಿದ್ದಾರೆ.


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ಸಿಎಂ ಸ್ಥಾನಕ್ಕೆ ರಾಜೀನಾಮೆ?, ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

SCROLL FOR NEXT